ಸ್ಟಾಕ್ಹೋಮ್, ಅ.08(DaijiworldNews/AK): ಮೆಷಿನ್ ಲರ್ನಿಂಗ್ ಮತ್ತು ಕೃತಕ ನ್ಯೂರಲ್ ನೆಟ್ವರ್ಕ್ ಗೆ ಸಂಬಂಧಿಸಿದ ಸಂಶೋಧನೆ ಹಾಗೂ ಆವಿಷ್ಕಾರಗಳಿಗಾಗಿ ಅಮೆರಿಕದ ಜಾನ್ ಜೆ. ಹಾಪ್ಫೀ ಲ್ಡ್ ಮತ್ತು ಕೆನಡಾದ ಜೆಫ್ರಿ ಇ. ಹಿಂಟನ್ ಅವರಿಗೆ ಈ ಬಾರಿಯ ಭೌತವಿಜ್ಞಾನ ಕ್ಷೇ ತ್ರದ ನೊಬೆಲ್ ಪುರಸ್ಕಾರ ಘೋಷಿಸಲಾಗಿದೆ.
ಭೌತಶಾಸ್ತ್ರ ದ ಸಾಧನಗಳನ್ನು ಬಳಸಿಕೊಂಡು ಕೃತಕ ನ್ಯೂರಲ್ ನೆಟ್ವರ್ಕ್ ನಲ್ಲಿ ಮೆಷಿನ್ ಲರ್ನಿಂಗ್ ಸಕ್ರಿಯಗೊಳಿಸವಲ್ಲಿ ಈ ಇಬ್ಬರು ವಿಜ್ಞಾನಿಗಳು ಶ್ರಮಿಸಿದ್ದಾರೆ ಎಂದು ಆಯ್ಕೆ ಸಮಿತಿ ತಿಳಿಸಿದೆ.
ನಮ್ಮ ಮಿದುಳು ಕೆಲಸ ಮಾಡುವ ರೀ ತಿಯನ್ನು ಅನುಕರಿಸಿಯೇ ಯಂತ್ರಗಳು ಕಲಿಯುವಂತೆ ಮಾಡುವ ವಿಧಾನಕ್ಕೆ ‘ಕೃತಕ ನ್ಯೂರಲ್ ನೆಟ್ವರ್ಕ್ ಎನ್ನಲಾಗುತ್ತದೆ. ಕೃತಕ ಬುದ್ಧಿಮತ್ತೆ ಹೆಚ್ಚು ದಕ್ಷವಾಗಿ ಕಾರ್ಯ ನಿರ್ವ ಹಿಸಲು ಕೃತಕ ನ್ಯೂರಲ್ ನೆಟ್ವರ್ಕ್ ಸಹಕಾರಿಯಾಗಿದೆ.