ಟೆಲ್ ಅವೀವ್, ಅ.09(DaijiworldNews/AA): ಇರಾನ್ ಬೆಂಬಲಿತ ಹಿಜ್ಬುಲ್ಲಾ ಭಯೋತ್ಪಾದಕ ಗುಂಪಿನೊಂದಿಗೆ ನಡೆಯುತ್ತಿರುವ ಸಂಘರ್ಷದ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ವೀಡಿಯೋವೊಂದರಲ್ಲಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಪ್ರಾಕೃತಿಕ ಸೌಂದರ್ಯ, ಸಹಿಷ್ಣುತೆಗೆ ಹೆಸರುವಾಸಿಯಾಗಿದ್ದ ಮಧ್ಯಪ್ರಾಚ್ಯ ಈಗ ಹಿಜ್ಬುಲ್ಲಾ ಮದ್ದು ಗುಂಡುಗಳನ್ನು ಸಂಗ್ರಹಿಸಿದ್ದು, ಇರಾನಿನ ಮಿಲಿಟರಿ ನೆಲೆಯಾಗಿ ಮಾರ್ಪಟ್ಟಿದೆ. ಹಾಗಾಗಿ ಕೂಡಲೇ ನಿಮ್ಮ ದೇಶವನ್ನು ಕೂಡಲೇ ಹಿಂತೆಗೆದುಕೊಳ್ಳಿ ಎಂದು ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಇದು ಲೆಬನಾನ್ ಜನತೆಗೆ ನಮ್ಮ ಸಂದೇಶ. ನಿಮ್ಮ ದೇಶವನ್ನು ಮಧ್ಯಪ್ರಾಚ್ಯದ ಮುತ್ತು ಎಂದು ಕರೆಯುತ್ತಿದ್ದದ್ದು ನೆನಪಿದೆಯಾ? ಈಗ ಲೆಬನಾನ್ಗೆ ಏನಾಯಿತು? ನಿರಂಕುಶಾಧಿಕಾರಿಗಳು ಮತ್ತು ಭಯೋತ್ಪಾದಕರ ಗುಂಪು ಅದನ್ನು ನಾಶಪಡಿಸಿದರು. ಒಂದು ಕಾಲದಲ್ಲಿ ಲೆಬನಾನ್ ಸಹನೆ, ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಇಂದು ಅದು ಅವ್ಯವಸ್ಥೆಯ ಸ್ಥಳವಾಗಿದೆ, ಯುದ್ಧದ ಕೇಂದ್ರವಾಗಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ನಾವು ಗಾಜಾದಲ್ಲಿ ನೋಡುವಂತೆ ವಿನಾಶ ಮತ್ತು ದುಃಖಕ್ಕೆ ಕಾರಣವಾಗುವ ಸುದೀರ್ಘ ಯುದ್ಧದ ಪ್ರಪಾತಕ್ಕೆ ಬೀಳುವ ಮೊದಲು ಎಚ್ಚೆತ್ತುಕೊಳ್ಳಬೇಕು. ಈಗಲೂ ಲೆಬನಾನ್ ತಮ್ಮ ರಾಷ್ಟ್ರವನ್ನು ಉಳಿಸಿಕೊಳ್ಳಬಹುದು. ನೀವು ನಿಮ್ಮ ಹಿಂತಿರುಗಿದರೆ, ಯುದ್ಧವನ್ನು ನಿಲ್ಲಿಸಿದ್ರೆ, ಶಾಂತಿ ಸಮೃದ್ಧ ಹಾದಿಗೆ ಮರಳಬಹುದು. ನೀವು ಮಾಡದಿದ್ದರೆ, ಹಿಜ್ಬುಲ್ಲಾ ಮಂದುವರಿಯುತ್ತದೆ. ನಿಮ್ಮ ನೇತೃತ್ವ ಖರ್ಚು ವೆಚ್ಚದಲ್ಲಿ ಇಸ್ರೇಲ್ ವಿರುದ್ಧ ಹೋರಾಡಲು ಪ್ರಯತ್ನಿಸಿ, ಲೆಬನಾನ್ ಅನ್ನು ಯುದ್ಧಕ್ಕೆ ಎಳೆದು ತರುತ್ತಾರೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದಾರೆ.