ಕಂಪಾಲಾ,ಅ.17(DaijiworldNews/TA):ಸ್ವಿಸ್ ಉದ್ಯಮಿ ಪಂಕಜ್ ಓಸ್ವಾಲ್ರ ಮಗಳನ್ನು ಉಗಾಂಡಾದಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಅವರ ಬಂಧನ ಅಕ್ರಮವಾಗಿದ್ದು, ಮಧ್ಯಪ್ರವೇಶಿಸುವಂತೆ ಉದ್ಯಮಿ ಓಸ್ವಾಲ್ ವಿಶ್ವಸಂಸ್ಥೆಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಅಕ್ಟೋಬರ್ 1 ರಿಂದ ತನ್ನ 26 ವರ್ಷದ ಮಗಳನ್ನು ವಿಚಾರಣೆಯಿಲ್ಲದೆ ಉಗಾಂಡಾದಲ್ಲಿ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಯುನೈಟೆಡ್ ನೇಷನ್ಸ್ ವರ್ಕಿಂಗ್ ಗ್ರೂಪ್ ಆನ್ ಆರ್ಬಿಟ್ರರಿ ಡಿಟೆನ್ಶನ್ (ಡಬ್ಲ್ಯೂಜಿಎಡಿ) ಗೆ ಮೇಲ್ಮನವಿ ಸಲ್ಲಿಸಿದ್ದು, ತನ್ನ ಮಗಳನ್ನು ಅವಮಾನಕರ ಪರಿಸ್ಥಿತಿಗಳಲ್ಲಿ ವಿಚಾರಣೆಗೊಳಪಡಿಸಲಾಗಿದೆ ಮತ್ತು ಕಾನೂನು ಸಲಹೆಗಾರರು ಅಥವಾ ಕುಟುಂಬಕ್ಕೆ ಪ್ರವೇಶವಿಲ್ಲದೆ 90 ಗಂಟೆಗಳ ಕಾಲ ಇರಿಸಲಾಗಿದೆ ಎಂದು ಹೇಳಿದ್ದಾರೆ. ಆಕೆಯನ್ನು ಬೇಷರತ್ ಬಿಡುಗಡೆಗೆ ನ್ಯಾಯಾಲಯದ ಆದೇಶದ ಹೊರತಾಗಿಯೂ ಬಂಧಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪಂಕಜ್ ಅವರ ಪುತ್ರಿ ವಸುಂಧರಾ ಓಸ್ವಾಲ್ ಅವರು PRO ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಅವರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ದೂರಲಾಗಿದೆ. ಓಸ್ವಾಲ್ ಅವರ ಹಣವನ್ನು ಸುಲಿಗೆ ಮಾಡಲು ಮತ್ತು ಅವರ ಹೆಸರನ್ನು ಕೆಡಿಸಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.