ಜೆರುಸಲೇಂ, ಅ.18(DaijiworldNews/AA): ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ನ ಹತ್ಯೆ ಮಾಡಲಾಗಿದ್ದು, ಆತನ ಕೊನೆಯ ಕ್ಷಣಗಳ ಡ್ರೋನ್ ದೃಶ್ಯವನ್ನು ಇಸ್ರೇಲ್ ಅವರು ಬಿಡುಗಡೆ ಮಾಡಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆ ಮಾಡಿದ ಈ ವಿಡಿಯೋದಲ್ಲಿ ಹಾನಿಗೊಳಗಾದ ಮತ್ತು ಶಿಥಿಲಗೊಂಡ ಮನೆಯೊಳಗೆ ಸಿನ್ವಾರ್ ಮಂಚದ ಮೇಲೆ ಕುಳಿತಿರುವುದನ್ನು ವೀಡಿಯೋ ತೋರಿಸಿದೆ. ಆತನ ಅಂತಿಮ ಕ್ಷಣಗಳಲ್ಲಿ, ಡ್ರೋನ್ಗೆ ವಸ್ತುವನ್ನು ಎಸೆಯುವುದನ್ನು ಕಾಣಬಹುದಾಗಿದೆ. ಈ ವಿಯೋವನ್ನು ಇಸ್ರೇಲ್ ಯಾಹ್ಯಾ ಸಿನ್ವಾರ್ನ 'ಕೊನೆಯ ಕ್ಷಣಗಳು' ಎಂದು ಹೇಳಿ ಪೋಸ್ಟ್ ಮಾಡಿದೆ.
ಇಸ್ರೇಲ್ ಗುರುವಾರ ಗಾಜಾ ಕಾರ್ಯಾಚರಣೆಯಲ್ಲಿ ಸಿನ್ವಾರ್ನನ್ನು ಹತ್ಯೆ ಮಾಡಿತ್ತು. 'ಎಲಿಮಿನೇಟೆಡ್: ಯಾಹ್ಯಾ ಸಿನ್ವಾರ್' ಎಂದು ಐಡಿಎಫ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಇನ್ನು ಅಕ್ಟೋಬರ್ 7 ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ ಕೊಲೆಗಾರ ಯಾಹ್ಯಾ ಸಿನ್ವಾರ್ ಅನ್ನು ಐಡಿಎಫ್ ಸೈನಿಕರು ನಿರ್ಮೂಲನೆ ಮಾಡಿದರು ಎಂದು ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ.