ನ್ಯೂಯಾರ್ಕ್,ಅ.31(DaijiworldNews/TA):ಪೆಪ್ಸಿಕೋ ತನ್ನ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಪ್ರಯತ್ನಗಳ ಭಾಗವಾಗಿ ನಾಲ್ಕು ಯುಎಸ್ ಬಾಟ್ಲಿಂಗ್ ಪ್ಲಾಂಟ್ಗಳನ್ನು ಮುಚ್ಚಲು ಮತ್ತು ಸುಮಾರು 400 ಕಾರ್ಮಿಕರನ್ನು ವಜಾಗೊಳಿಸಲು ಯೋಜಿಸಿದೆ ಎಂದು ಬುಧವಾರ ಹೇಳಿದೆ.
ಷೇರು ವಿನಿಮಯ ಕೇಂದ್ರಕ್ಕೆ ಪೆಪ್ಸಿಕೋ ನೀಡಿದ ಮಾಹಿತಿ ಪ್ರಕಾರ ಅಮೆರಿಕದ ಸಿನ್ಸಿನಾಟಿ, ಚಿಕಾಗೋ, ಪೆನ್ಸಿಲ್ವೇನಿಯಾ ಮತ್ತು ಅಟ್ಲಾಂಟಾದ ಬಾಟ್ಲಿಂಗ್ ಯೂನಿಟ್ಗಳು ಮುಚ್ಚಲ್ಪಡುತ್ತಿವೆ ಎಂದು ಹೇಳಲಾಗಿದೆ. ಮುಚ್ಚಲಾಗುತ್ತಿರುವ ನಾಲ್ಕು ಘಟಕಗಳ ಪೈಕಿ ಚಿಕಾಗೋ ಯೂನಿಟ್ ಪೂರ್ಣವಾಗಿ ಬಂದ್ ಆಗುತ್ತದೆ.
ಇನ್ನುಳಿದ ಮೂರು ಘಟಕಗಳಲ್ಲಿ ಬಾಟ್ಲಿಂಗ್ ಯೂನಿಟ್ ಮಾತ್ರವೇ ಮುಚ್ಚಲಾಗುತ್ತದೆ. ಅಮೆರಿಕದಲ್ಲಿ 75ಕ್ಕೂ ಹೆಚ್ಚು ಬಾಟ್ಲಿಂಗ್ ಘಟಕಗಳನ್ನು ಹೊಂದಿದೆ. ಹೀಗಾಗಿ, ನಾಲ್ಕು ಘಟಕಗಳನ್ನು ಮುಚ್ಚುತ್ತಿರುವುದು ಕಂಪನಿಗೆ ಆಘಾತಕಾರಿ ಸಂಗತಿಯಲ್ಲ. ಬಿಸಿನೆಸ್ ಕಡಿಮೆ ಆಗುತ್ತಿರುವ ಕಾರಣ, ಅದನ್ನು ಸರಿದೂಗಿಸಲು ಮತ್ತು ಅನಗತ್ಯ ವೆಚ್ಚ ಕಡಿಮೆ ಮಾಡಲು ಬಾಟ್ಲಿಂಗ್ ಪ್ಲಾಂಟ್ಸ್ ಮುಚ್ಚುತ್ತಿದೆ ಎಂದು ಹೇಳಲಾಗಿದೆ.