ವಾಷಿಂಗ್ಟನ್, ನ.01(DaijiworldNews/AA): ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಪ್ರಪಂಚದಾದ್ಯಂತ ಹಿಂದೂಗಳನ್ನು ಕಡೆಗಣಿಸಿದ್ದಾರೆ. ಹಿಂದೂ ಅಮೆರಿಕನ್ನರತ್ತ ಗಮನ ಹರಿಸಲು ವಿಫಲರಾಗಿದ್ದಾರೆ ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಜಗತ್ತಿನಾದ್ಯಂತ ಇರುವ ಹಿಂದೂಗಳಿಗೆ ದೀಪಾವಳಿ ಹಬ್ಬದ ಶುಭ ಹಾರೈಸಿದ ಟ್ರಂಪ್ ಅವರು, ಬಾಂಗ್ಲಾದೇಶದ ಹಿಂದೂಗಳು ಎದುರಿಸುತ್ತಿರುವ ದೌರ್ಜನ್ಯಗಳನ್ನು ಟ್ರಂಪ್ ಖಂಡಿಸಿದ್ದಾರೆ.
ಹಿಂದೂ ಅಮೆರಿಕನ್ನರನ್ನು ಧಾರ್ಮಿಕ ವಿರೋಧಿ ಅಜೆಂಡಾಗಳಿಂದ ರಕ್ಷಿಸುವ ಅಗತ್ಯ ಇದೆ. ಮುಂಬರುವ ಚುನಾವಣೆಯಲ್ಲಿ ಗೆದ್ದರೆ ತಮ್ಮ 'ಉತ್ತಮ ಸ್ನೇಹಿತ' ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯುಎಸ್-ಭಾರತ ಸಂಬಂಧವನ್ನು ಬಲಪಡಿಸುವುತ್ತೇವೆ. 'ನಾವು ನಿಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇವೆ. ನನ್ನ ಅಧಿಕಾರದಲ್ಲಿ ಆಡಳಿತ ಉತ್ತಮವಾಗಿರುತ್ತದೆ. ನಾವು ಭಾರತ ಮತ್ತು ನನ್ನ ಉತ್ತಮ ಸ್ನೇಹಿತ ಪ್ರಧಾನಿ ಮೋದಿಯವರೊಂದಿಗೆ ನಮ್ಮ ಉತ್ತಮ ಪಾಲುದಾರಿಕೆಯನ್ನು ಬಲಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಜನಸಮೂಹದಿಂದ ದಾಳಿ ಮತ್ತು ಲೂಟಿಗೆ ಒಳಗಾಗುತ್ತಿರುವ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ಅನಾಗರಿಕ ಹಿಂಸಾಚಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಒಟ್ಟಾರೆ ಅವ್ಯವಸ್ಥೆಯ ಸ್ಥಿತಿಯಲ್ಲಿಯೇ ಉಳಿದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.