ಖೈಬರ್ ಪಖ್ತುಂಖ್ವಾ, ನ.20(DaijiworldNews/AA): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಚೆಕ್ ಪೋಸ್ಟ್ಗೆ ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ ಘಟನೆ ನಡೆದಿದ್ದು, ಇದರಲ್ಲಿ 12 ಭದ್ರತಾ ಸಿಬ್ಬಂದಿ ಮತ್ತು 6 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆ ಇಂದು ಮಾಹಿತಿ ನೀಡಿದೆ.
ಮಂಗಳವಾರ ತಡರಾತ್ರಿ ಬನ್ನು ಜಿಲ್ಲೆಯ ಮಾಲಿಖೇಲ್ ಸಾಮಾನ್ಯ ಪ್ರದೇಶದಲ್ಲಿರುವ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರು ದಾಳಿ ನಡೆಸಲು ಯತ್ನಿಸಿದ್ದಾರೆ. ಆದರೆ ಚೆಕ್ ಪೋಸ್ಟ್ ಪ್ರವೇಶಿಸುವ ಅವರ ಪ್ರಯತ್ನವನ್ನು ಸೇನಾಪಡೆಗಳು ವಿಫಲಗೊಳಿಸಿದೆ. ಆದರೂ ಸತತ ಪ್ರಯತ್ನದ ಬಳಿಕ ಈ ದಾಳಿ ನಡೆಸಲಾಯಿತು. ಆತ್ಮಹತ್ಯಾ ಬಾಂಬ್ ಸ್ಫೋಟವು ಸುತ್ತಲಿನ ಗೋಡೆಯ ಒಂದು ಭಾಗದ ಕುಸಿತಕ್ಕೆ ಕಾರಣವಾಯಿತು. ಇದು ಸುತ್ತಮುತ್ತಲಿನ ಸ್ಥಳಗಳನ್ನು ಹಾನಿಗೊಳಿಸಿತು. ದಾಳಿಯ ಪರಿಣಾಮವಾಗಿ ಭದ್ರತಾ ಪಡೆಗಳ 12 ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕ್ ಸೇನೆ ತಿಳಿಸಿದೆ.
ನಂತರದ ಶೂಟೌಟ್ ನಲ್ಲಿ 6 ಉಗ್ರರು ಕೂಡ ಸಾವನ್ನಪ್ಪಿದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಮದು ತಿಳಿದುಬಂದಿದೆ.
ನ. 9ರಂದು ಕ್ವೆಟ್ಟಾದಲ್ಲಿ ರೈಲ್ವೆ ನಿಲ್ದಾಣದ ಸ್ಫೋಟದಲ್ಲಿ 14 ಪಾಕಿಸ್ತಾನಿ ಸೈನಿಕರು ಸೇರಿದಂತೆ 25 ಮಂದಿ ಮೃತಪಟ್ಟಿದ್ದರು. ಈ ಸ್ಫೋಟವು ಬಲೂಚಿಸ್ತಾನ್ ರಾಜಧಾನಿಯ ಮುಖ್ಯ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಪ್ಲಾಟ್ಫಾರ್ಮ್ನಲ್ಲಿ ಕಾಯುತ್ತಿದ್ದಾಗ ಸಂಭವಿಸಿತ್ತು.