ಕೊರಿಯಾ,ಡಿ. 14(DaijiworldNews/AK): ಒಂದು ದೇಶದ ಪ್ರಜಾಪ್ರಭುತ್ವ ಎಷ್ಟು ಮುಖ್ಯ, ಅದು ಎಷ್ಟು ಗಟ್ಟಿಯಾಗಿರಬೇಕು ಎನ್ನುವುದಕ್ಕೆ ಈ ವರದಿ ಸಾಕ್ಷಿ. ಒಂದು ದೇಶದ ಅಧ್ಯಕ್ಷನ ವಿರುದ್ಧ ಇಡೀ ದೇಶವೇ ಅದರಲ್ಲೂ ಅವರದ್ದೇ ಪಕ್ಷದ ನಾಯಕರು, ಜನರ ಪರ ನಿಂತು ಅಧ್ಯಕ್ಷರ ವಿರುದ್ಧ ದೋಷಾರೋಪಣೆ ಮತ ಹಾಕಿದ್ದಾರೆ.
ಇದೀಗ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಕೊರಿಯದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ದಕ್ಷಿಣ ಕೊರಿಯಾದಲ್ಲಿ ಸಮರ ಕಾನೂನನ್ನು ಹೇರಿದರು. ಕೆಲವು ಗಂಟೆಗಳ ನಂತರ, ಸಂಸತ್ತಿನಲ್ಲಿ ಮತ ಚಲಾಯಿಸುವ ಮೂಲಕ ಸಂಸದರು ಅದನ್ನು ತೆಗೆದುಹಾಕಿದರು.
ಇದೀಗ ಅಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ವಿರುದ್ಧ ದೋಷಾರೋಪಣೆ ಮತ ಹಾಕಿದ್ದಾರೆ. ಇದರಲ್ಲಿ ಅಚ್ಚರಿಯ ಸಂಗತಿ ಎಂದರೆ ಅವರ ಪಕ್ಷದ ಸಂಸದರೇ ಅವರ ವಿರುದ್ಧ ದೋಷಾರೋಪಣೆ ಮತ ಹಾಕಲು ಮುಂದಾಗಿದ್ದಾರೆ.
ಇದೀಗ ಈ ಮತ ಚಲಾಯಿಸುವ ಮೂಲಕ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲಾಗಿದೆ. ಹಾಗೂ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ಹಾನ್ ಡಕ್-ಸೂ ಆಯ್ಕೆ ಆಗಿದ್ದಾರೆ.