ತೈವಾನ್, ಡಿ.18(DaijiworldNews/AA): ಚಲಿಸುವ ರೈಲಿನ ಮುಂದೆ ನಿಂತು ಮಹಿಳೆಯೊಬ್ಬಳು ಸೆಲ್ಫಿ ತೆಗೆಯಲು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ತೈವಾನ್ನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ವರದಿಗಳ ಪ್ರಕಾರ, ಡಿಸೆಂಬರ್ ೧೪ ರಂದು ಲುಯಿ ಎಂಬ ಮಹಿಳೆ ರಜೆಗಾಗಿ ತೈವಾನ್ನ ಚಿಯಾಯ್ನಲ್ಲಿರುವ ಅಲಿಶಾನ್ ಫಾರೆಸ್ಟ್ ರೈಲ್ವೆ ಬಳಿ ತೆರಳಿದ್ದಾರೆ. ದೂರದಿಂದ ರೈಲು ಬರುತ್ತಿರುವುದನ್ನು ಕಂಡ ಮಹಿಳೆ ತಕ್ಷಣ ಸೆಲ್ಫಿ ತೆಗೆದುಕೊಳ್ಳಲು ರೈಲಿನ ಹಳಿಯ ಪಕ್ಕದಲ್ಲಿ ನಿಂತುಕೊಂಡಿದ್ದು, ರೈಲು ಬಂದ ರಭಸಕ್ಕೆ ಆಕೆಗೆ ಡಿಕ್ಕಿ ಹೊಡೆದಿದೆ.
ಸದ್ಯ ಮಹಿಳೆಗೆ ಸಣ್ಣಪುಟ್ಟ ಗಾಯಗಳಿದ್ದು, ಅದೃಷ್ಟವಶಾತ್ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಡಿಕ್ಕಿಯ ರಭಸಕ್ಕೆ ಲೂಯಿಸ್ ಅವರ ಎಡಗಾಲಿಗೆ ಗಾಯವಾಗಿದೆ. ಇನ್ನು ಘಟನೆಯಿಂದಾಗಿ ರೈಲು ಸಂಚಾರದಲ್ಲಿ 60 ನಿಮಿಷಗಳ ವಿಳಂಬವಾಗಿದ್ದು, ಸಾವಿರಾರೂ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.