ಕೊಲಂಬೊ, ಡಿ.24(DaijiworldNews/AA): ಶ್ರೀಲಂಕಾದ ಪೂರ್ವ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಭಾರತವು 230.71 ಕೋಟಿ ರೂ. ನೆರವು ನೀಡುತ್ತಿದೆ ಎಂದು ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಶ್ರೀಲಂಕಾ ಆರೋಗ್ಯ ಸಚಿವ ಹಾಗೂ ವಕ್ತಾರ ನಳಂದಾ ಜಯಥಿಸ್ಸಾ ಅವರು ತಿಳಿಸಿದ್ದಾರೆ.
ನಮ್ಮ ಕೋರಿಕೆಯ ಮೇರೆಗಿನ ಭಾರತ್ ಸರ್ಕಾರದ ಪ್ರಸ್ತಾವಗಳಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿ ಸಹಿ ಹಾಕಿದೆ. ಇದು ಉಭಯ ರಾಷ್ಟ್ರಗಳ ರಾಜಕೀಯ-ಆರ್ಥಿಕ ಸಹಕಾರ ಬಲ ವೃದ್ಧಿಗೆ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.
230.71 ಕೋಟಿ ರೂಪಾಯಿಯಲ್ಲಿ 30.15 ಕೋಟಿ ರೂಪಾಯಿ ಶಿಕ್ಷಣಕ್ಕೆ 70.80 ಕೋಟಿ ರೂ. ಆರೋಗ್ಯಕ್ಕೆ ಮತ್ತು 60.20 ಕೋಟಿ ರೂಪಾಯಿಯನ್ನು ಕೃಷಿ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಇದರಿಂದ ಸ್ಥಳೀಯರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಲಿ. ಇದಕ್ಕಾಗಿ ನಾವು ಭಾರತ್ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಅವರು ವಿವರಿಸಿದರು.