ಅಸ್ತಾನಾ,ಡಿ.25(DaijiworldNews/TA): ಅಜರ್ಬೈಜಾನ್ ಏರ್ಲೈನ್ಸ್ನ ಪ್ರಯಾಣಿಕ ವಿಮಾನವು ಕಝಾಕಿಸ್ತಾನ್ನ ಅಕ್ಟೌ ನಗರದ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ.
ಎಂಬ್ರೇರ್ 190 ವಿಮಾನವು ಅಜರ್ಬೈಜಾನ್ನ ರಾಜಧಾನಿ ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರ್ಜೋನಿಗೆ ತೆರಳುತ್ತಿತ್ತು ಆದರೆ ಗ್ರೋಜ್ನಿಯಲ್ಲಿ ಮಂಜಿನಿಂದಾಗಿ ಮಾರ್ಗವನ್ನು ಬದಲಾಯಿಸಲಾಯಿತು. ಐವರು ಸಿಬ್ಬಂದಿಯೊಂದಿಗೆ ಅರವತ್ತೆರಡು ಪ್ರಯಾಣಿಕರು ವಿಮಾನದಲ್ಲಿದ್ದರು. ಮಾಹಿತಿಯ ಪ್ರಕಾರ, 28 ಪ್ರಯಾಣಿಕರು ಬದುಕುಳಿದವರು ಅವರಲ್ಲಿ 22 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಚಿವಾಲಯ ಟೆಲಿಗ್ರಾಮ್ನಲ್ಲಿ ತಿಳಿಸಿದೆ.
ವಿಮಾನದ ಪ್ರಯಾಣಿಕರಲ್ಲಿ 37 ಮಂದಿ ಅಜರ್ಬೈಜಾನ್ನಿಂದ, ಆರು ಮಂದಿ ಕಜಕಿಸ್ತಾನ್ನಿಂದ, ಮೂವರು ಕಿರ್ಗಿಸ್ತಾನ್ನಿಂದ ಮತ್ತು 16 ಮಂದಿ ರಷ್ಯಾದಿಂದ ಬಂದವರು ಎಂದು ಕಝಕ್ ಸಾರಿಗೆ ಸಚಿವಾಲಯ ತಿಳಿಸಿದೆ. ವಿಮಾನದ ಹಿಂಭಾಗದ ತುದಿಯಲ್ಲಿರುವ ತುರ್ತು ನಿರ್ಗಮನದಿಂದ ಪ್ರಯಾಣಿಕರನ್ನು ಡಿಬೋರ್ಡಿಂಗ್ ಮಾಡಲಾಗಿದೆ ಎಂದು ಹೇಳಲಾಗಿದೆ.