ಪ್ರಿಟೋರಿ, ಮಾ.25(DaijiworldNews/TA): ಆಫ್ರಿಕಾದಲ್ಲಿ ಕಾಸರಗೋಡು ನಿವಾಸಿ ಸೇರಿದಂತೆ ಹತ್ತು ಮಂದಿ ಸಿಬ್ಬಂದಿಯನ್ನು ಕಡಲುಕಳ್ಳರು ಅಪಹರಿಸಿರುವುದಾಗಿ ಸಂಬಂಧಿಕರಿಗೆ ಮಾಹಿತಿ ಲಭಿಸಿದೆ. ಕಾಸರಗೋಡು ಕೋಟಿಕುಳಂ ಗೋಪಾಲ್ ಪೇಟೆಯ ರಾಜೇಂದ್ರನ್ ಭಾರ್ಗವನ್ (35) ಸೇರಿದಂತೆ ಹತ್ತು ಮಂದಿಯನ್ನು ಅಪಹರಿಸಲಾಗಿದೆ.

ಆಫ್ರಿಕಾ ದಿಂದ ಲೋಮೋ ಬಂದರಿನಿಂದ ಕ್ಯಾಮರೋನ್ ಗೆ ತೆರಳುತ್ತಿದ್ದ ಸರಕು ಹಡಗನ್ನು ಕಡಲು ಕಳ್ಳರು ಅಪ\ಹರಿಸಿ ಸಿಬಂದಿಗಳನ್ನು ಬಂಧಿ ಯಾಗಿಸಿದ್ದಾರೆ. ಪನಾಮಾ ನೋಂದಣಿಯ ವಿಟೂ ರಿವರ್ ಕಂಪೆನಿಯ ಈ ಹಡಗು ಮುಂಬೈ ಕೇಂದ್ರವಾಗಿರುವ ಮೇರಿ ಟೆಕ್ ಟ್ಯಾಂಕರ್ ಮೆನೇಜ್ ಮೆಂಟ್ ಸರಕು ಸಾಗಾಟಕ್ಕೆ ಬಳಸಲಾಗುತ್ತಿದೆ. ವಿಟೂ ರಿವರ್ ಕಂಪೆನಿ ಅಧಿಕಾರಿಗಳು ಅಪಹರಣದ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ.