ನೈಪಿಡಾವ್/ಬ್ಯಾಂಕಾಕ್ , ಮಾ.28(DaijiworldNews/AK) : ಭಾರತದ ನೆರೆ ರಾಷ್ಟ್ರ ಮ್ಯಾನ್ಮಾರ್ ನಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ 11:50ರ ಸುಮಾರಿಗೆ ಭೂಮಿ ನಡುಗಿದ್ದು ಕ್ಷಣಾರ್ಧದಲ್ಲಿ ಗಗನ ಚುಂಬಿ ಕಟ್ಟಡಗಳು ನೆಲಕ್ಕುರುಳಿ ಬಿದ್ದಿವೆ. ಅಲ್ಲದೇ ಕನಿಷ್ಠ 43 ಕಾರ್ಮಿಕರು ನಾಪತ್ತೆಯಾಗಿವೆ ಎಂದು ವರದಿಯಾಗಿದೆ. ಮೊದಲ ಕಂಪನದ ತೀವ್ರತೆ 7.2ರಷ್ಟಿದ್ದರೆ, 2ನೇ ಸಲ ಕಂಪನದ ತೀವ್ರತೆ 7ರಷ್ಟು ದಾಖಲಾಗಿದೆ. ಮ್ಯಾನ್ಮಾರ್ನಲ್ಲಿಂದು ಸಂಭವಿಸಿದ
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನಲ್ಲೂ ಭೂಮಿ ಕಂಪಿಸಿದೆ. ವಿಯೆಟ್ನಾಂ ಸೇರಿದಂತೆ ನೆರೆಯ ದೇಶಗಳಲ್ಲು ಭೂಕಂಪನದ ಅನುಭವವಾಗಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಕಂಪನ ಆಗಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ.ಮ್ಯಾನ್ಮಾರ್ನಲ್ಲಿಂದು ಎರಡು ಬಾರಿ ಪ್ರಬಲ ಭೂಕಂಪ ಸಂಭವಿಸಿದೆ. ಮೊದಲ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲೇ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ.

ರಿಕ್ಷರ್ ಮಾಪಕದಲ್ಲಿ ಮೊದಲ ಬಾರಿ ಭೂಕಂಪದ ತೀವ್ರತೆ 7.7, 2ನೇ ಬಾರಿಗೆ 6.4 ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಇದರಿಂದ ಮಯನ್ಮಾರ್ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 11.50ರ ಸುಮಾರಿಗೆ ಭೂಮಿಯ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ತಕ್ಷಣಕ್ಕೆ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ. ಅತ್ತ ಬ್ಯಾಂಕಾಕ್ನಲ್ಲೂ ಭೂಕಂಪದ ಎಫೆಕ್ಟ್ ತಟ್ಟಿದೆ. ಬ್ಯಾಂಕಾಕ್ ಹಾಗೂ ಥೈಲ್ಯಾಂಡ್ನಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ.