ಇಸ್ಲಮಾಬಾದ್, ಮೇ.01(DaijiworldNews/TA): ಪಾಕಿಸ್ತಾನವು ತನ್ನ ಪ್ರಸ್ತುತ ಬೇಹುಗಾರಿಕೆ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಹಮ್ಮದ್ ಅಸಿಮ್ ಮಲಿಕ್ ಅವರನ್ನು ಹೊಸ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಆಗಿ ನೇಮಿಸಿದೆ. ಈ ಮೂಲಕ ಮೊದಲ ಬಾರಿಗೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ನ ಮಹಾನಿರ್ದೇಶಕರೊಬ್ಬರು ಏಕಕಾಲದಲ್ಲಿ ಎರಡೂ ನಿರ್ಣಾಯಕ ಹುದ್ದೆಗಳನ್ನು ಅಲಂಕರಿಸಲಿದ್ದಾರೆ.

ಮಂಗಳವಾರ ಸಂಪುಟ ವಿಭಾಗದ ಅಧಿಸೂಚನೆಯ ಮೂಲಕ ಘೋಷಿಸಲಾದ ಈ ನೇಮಕಾತಿ, ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಭಾರತ-ಪಾಕಿಸ್ತಾನ ಸಂಬಂಧಗಳು ಹದಗೆಡುತ್ತಿರುವ ನಿರ್ಣಾಯಕ ಸಮಯದಲ್ಲಿ ಈ ಬದಲಾವಣೆ ಮಹತ್ವಪೂರ್ಣದ್ದಾಗಿದೆ.
2024 ರ ಅಕ್ಟೋಬರ್ನಲ್ಲಿ ಐಎಸ್ಐ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಲೆಫ್ಟಿನೆಂಟ್ ಜನರಲ್ ಮಲಿಕ್ ಅವರು ಪಾಕಿಸ್ತಾನದ ಹತ್ತನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾದರು. ಏಪ್ರಿಲ್ 2022 ರಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕಿದಾಗ ಡಾ. ಮೊಯೀದ್ ಯೂಸುಫ್ ಅವರ ನಿರ್ಗಮನದ ನಂತರ ಈ ಸ್ಥಾನ ಎರಡು ವರ್ಷಗಳ ಕಾಲ ಖಾಲಿಯಾಗಿತ್ತು.