ದುಬೈ, ಜೂ 26 (Daijiworld News/MSP): ದುಬೈನಲ್ಲಿ ಮೃತಪಟ್ಟ ಮಗನ ಲಕ್ಷಾಂತರ ರೂ. ಸಂಪತ್ತು ಎಂಟು ವರ್ಷಗಳ ಬಳಿಕ ಭಾರತೀಯ ಮಹಿಳೆಯೊಬ್ಬರ ಕೈ ಸೇರಿದೆ. 75 ವರ್ಷದ ಮೇರಿಕುಟ್ಟಿ ಥಾಮಸ್ ಎಂಬುವವರ 35 ವರ್ಷದ ಮಗ ಶಿನೋ ಅವಿವಾಹಿತರಾಗಿದ್ದು ಅವರು ದುಬೈನಲ್ಲಿ ಉತ್ತಮ ಸಂಬಳದಲ್ಲಿ ಕೆಲಸದಲ್ಲಿದ್ದರು. ಆದರೆ ದುರಾದೃಷ್ಟವಶಾತ್ ಎಂಟು ವರ್ಷಗಳ ಹಿಂದೆ ಮೃತಪಟ್ಟಿದ್ದರು.
ಮೇರಿಕುಟ್ಟಿ ಥಾಮಸ್ ಅವರ ಹಿರಿಯ ಮಗ ಹಾಗೂ ಶೀನೋ ಸಹೋದರ ತಮ್ಮನ ಉಳಿತಾಯವನ್ನು ಪಡೆಯಲು ದುಬೈನ ಕಂಪನಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಯಾಕೆಂದರೆ ಮರುವರ್ಷವೇ ಮೇರಿಕುಟ್ಟಿ ಥಾಮಸ್ ಅವರ ಹಿರಿಯ ಮಗನೂ ನಿಧನರಾಗಿದ್ದರು. ತಮ್ಮ ಪುತ್ರರನ್ನು ಕಳೆದುಕೊಂಡು ದುಃಖತಪ್ತರಾಗಿದ್ದ ಅವರು ಮೃತ ಶೀನೋ ದುಬೈ ಸಂಪಾದನೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ಆದರೆ ಇದೀಗ ಎಂಟು ವರ್ಷಗಳ ನಂತರ ಮಗನ ಸಂಬಂಧಿಸಿದ 75 ಲಕ್ಷ ರೂ. ಸಂಪತ್ತು ಶೀನೋ ಕುಟುಂಬಕ್ಕೆ ದೊರಕಿದೆ. 2016 ರಲ್ಲಿ ಮೇರಿಕುಟ್ಟಿ ಥಾಮಸ್ ಸಂಬಂಧಿಯೊಬ್ಬರು ಶೀನೋಗೆ ಸಂಬಂಧಿಸಿದ ಎಲ್ಲವನ್ನು ವಾಪಾಸು ಪಡೆದಿದ್ದಾರೆಯೇ ಎಂದು ವಿಚಾರಿಸಿ ಅವರಿಗಾಗಿ ಸಹಾಯಹಸ್ತ ಚಾಚಿದರು. ಇದರ ಪರಿಣಾಮ ದುಬೈನಲ್ಲಿ ನ ವಿಲ್ ರೈಟಿಂಗ್ ಕಂಪನಿಯ ಜಸ್ಟ್ ವಿಲ್ಸ್ ಸಂಸ್ಥಾಪಕ ಮೊಹಮ್ಮದ್ ಮರಿಯಾ ಅವರೊಂದಿಗೆ ಕುಟುಂಬ ಸಂಪರ್ಕಿಸಿತು. ಈ ಸಂಸ್ಥೆ ಶೀನೋ ಉಳಿತಾಯವನ್ನು ತಾಯಿ ಮೇರಿಕುಟ್ಟಿಗೆ ಯಶಸ್ವಿಯಾಗಿ ಹಸ್ತಾಂತರಿಸಲು ನೆರವಾಯಿತು.
ಮಗ ಒಟ್ಟು 75 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ತಾಯಿಗೆ ವಿಲ್ ಮಾಡಿದ್ದು ಅದರಲ್ಲಿ 33 ಲಕ್ಷ ತಾಯಿಗೆ ಶೇರ್ ಮಾಡಲಾಗಿದೆ. ನಿವೃತ್ತ ನರ್ಸ್ ಆಗಿರುವ ಮೇರಿಕುಟ್ಟಿ ಥಾಮಸ್, "ಇದು ನನ್ನ ಮಗನ ಕಠಿಣ ಪರಿಶ್ರಮದ ಸಂಪಾದನೆಯಾಗಿದೆ". ನನ್ನ ಮಗನ ಹಣವನ್ನು ಉಳಿಸುವ ಬಗ್ಗೆ ತನಗೆ ತಿಳಿದಿತ್ತು, ಅದರೆ ಇಷ್ಟು ದೊಡ್ಡ ಮೊತ್ತ ಎಂದು ತಿಳಿದಿರಲಿಲ್ಲ" ಎಂದು ಹೇಳಿದರು.