ವಾಷಿಂಗ್ಟನ್, ಆ.17 (Daijiworld News/AK): ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಜೊತೆಗೆ ವಿಶ್ವದಾದ್ಯಂತ ಉದ್ವಿಗ್ನತೆ ಇರುವ ಇತರ ತಾಣಗಳ ಮೇಲೆ ಅಮೆರಿಕ ಪ್ರತಿದಿನ ನಿಗಾ ಇಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.

ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಡುವ ಸುಳಿವು ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದಗಳು ದುರ್ಬಲವಾಗಿವೆ. ಅವುಗಳನ್ನ ನಿರ್ವಹಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಕದನ ವಿರಾಮ ಶೀಘ್ರದಲ್ಲೇ ಸ್ಥಗಿತಗೊಳ್ಳಬಹುದು ಎಂದು ಎಂದು ಎಚ್ಚರಿಸಿದ್ದಾರೆ.
ಪ್ರತಿದಿನ ನಾವು ಭಾರತ-ಪಾಕಿಸ್ತಾನದ ನಡುವೆ ಏನಾಗುತ್ತಿದೆ? ಕಾಂಬೋಡಿಯಾ – ಥೈಲ್ಯಾಂಡ್ ನಡ್ವೆ ಏನಾಗುತ್ತಿದೆ? ಅನ್ನೋದರ ಮೇಲೆ ಕಣ್ಣಿಟ್ಟಿದ್ದೇವೆ. ಈ ನಿಟ್ಟಿನಲ್ಲಿ ನೋಡಿದಾಗ ಭಾರತ-ಪಾಕ್ ಕದನ ವಿರಾಮ ಸ್ಥಗಿತವಾಗಬಹುದು ಅನ್ನಿಸಿರುವುದಾಗಿ ತಿಳಿಸಿದರು.
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ್ದು ಟ್ರಂಪ್ ಅಂತ ರೂಬಿಯೋ ಕೂಡ ಪುನರುಚ್ಚರಿಸಿದ್ದಾರೆ. ನಾವು ತುಂಬಾ ಅದೃಷ್ಟವಂತರು. ಶಾಂತಿ ಮತ್ತು ಶಾಂತಿ ಸಾಧನೆಯನ್ನೇ ತಮ್ಮ ಆಡಳಿತದ ಆದ್ಯತೆಯನ್ನಾಗಿ ಮಾಡಿಕೊಂಡ ಅಧ್ಯಕ್ಷರನ್ನ ಹೊಂದಿರುವುದಕ್ಕೆ ಕೃತಜ್ಞರಾಗಿರಬೇಕು ಎಂದು ಟ್ರಂಪ್ ಅವರನ್ನು ಹೊಗಳಿದ್ದಾರೆ.