ಬೀಜಿಂಗ್, ಅ. 06 (DaijiworldNews/AA): ತಾನು ಭಾರತದಿಂದ ಹೆಚ್ಚು ಸರಕುಗಳನ್ನು ಖರೀದಿಸಲು ಸಿದ್ಧ. ಆದರೆ ಮಹತ್ವಾಕಾಂಕ್ಷಿ ವ್ಯಾಪಾರ ಕೂಟವಾದ ಆರ್ಸಿಇಪಿಯನ್ನು ಭಾರತ ಸೇರಬೇಕು ಎಂದು ಚೀನಾ ಷರತ್ತು ಹಾಕಿದೆ.

ಈ ಬಗ್ಗೆ ಮಾತನಾಡಿದ ಚೀನಾದ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಫೈನಾನ್ಸ್ ಸ್ಟಡೀಸ್ನ ನಿರ್ದೇಶಕ ಹಾಗೂ ಆರ್ಥಿಕ ತಜ್ಞ ಲಿಖಿಂಗ್ ಝಾಂಗ್ ಅವರು, "ಭಾರತವು ಆರ್ಸಿಇಪಿಗೆ ಸೇರಿದರೆ ಅದರ ಸರಕುಗಳು ಮುಕ್ತಾವಕಾಶ ಪಡೆಯುತ್ತವೆ" ಎಂದಿದ್ದಾರೆ.
ಭಾರತವು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ಸಿಇಪಿ) ಸೇರ್ಪಡೆಯಾದರೆ ಅದರ ಸರಕುಗಳ ಮೇಲಿನ ಸುಂಕಗಳು ಒಂದು ದಶಕದಲ್ಲೇ ಸೊನ್ನೆಗೆ ಬರುತ್ತವೆ. ಇದರಿಂದ ಅದರ ಸರಕುಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ ಎಂದು ಚೀನಾದ ಆರ್ಥಿಕ ತಜ್ಞರು ತಿಳಿಸಿದ್ದಾರೆ.
ಆರಂಭದಲ್ಲಿ ಭಾರತವೂ ಈ ಕೂಟಕ್ಕೆ ಸೇರಲು ಯತ್ನಿಸಿತ್ತು. ಆದರೆ, ಚೀನಾ ಈ ಕೂಟದಲ್ಲಿ ಪ್ರಾಬಲ್ಯ ಹೊಂದಿರುವುದು, ಹಾಗೂ ಆ ದೇಶವು ಭಾರತದ ಮೇಲೆ ಗಡಿ ಸಂಘರ್ಷ ಮಾಡುತ್ತಿದ್ದುದು, ಆರ್ಸಿಇಪಿಯಿಂದ ಭಾರತ ಸಂಪೂರ್ಣ ಹಿಂದೆಸರಿಯಿತು.