ಕ್ಯಾನ್ಬೆರಾ, ಜು 07 (Daijiworld News/MSP): ಮೊಸಳೆಗಳನ್ನು ತಮಗೆ ಬೇಕಾದ ರೀತಿ ಪಳಗಿಸುವ ಮೂಲಕ ವಿಶ್ವಾದ್ಯಂತ ದಿ ಕ್ರೊಕೊಡೈಲ್ ಹಂಟರ್ ಎಂದೇ ಪ್ರಸ್ತಿದ್ದ ಆಸ್ಟ್ರೇಲಿಯಾದ ಮೂಲದ ಸ್ಟೀವ್ ಇರ್ವಿನ್ ಜಗತ್ತಿನ ಪ್ರಾಣಿಪ್ರೀಯರೆಲ್ಲರಿಗೂ ಚಿರಪರಿಚಿತ.
'ದಿ ಕ್ರೊಕೊಡೈಲ್ ಹಂಟರ್ ಡೈರೀಸ್', 'ಕ್ರೊಕ್ ಫೈಲ್ಸ್', 'ನ್ಯೂ ಬ್ರೀಡ್ ವೆಟ್ಸ್' ಮುಂತಾದ ಸರಣಿ ಕಾರ್ಯಕ್ರಮಗಳ ಮೂಲಕ ಮನೆಮಾತಗಿದ್ದ ಸ್ಟೀವ್ ಇರ್ವಿನ್ ಸ್ಟಿಂಗ್ ರೇ ಮೀನಿನ ದಾಳಿಗೆ ತುತ್ತಾಗಿ 2006ರಲ್ಲಿ ಅವರು ಮೃತಪಟ್ಟಿದ್ದರು.
ಇದೀಗ ಸ್ಟೀವ್ ಇರ್ವಿನ್ ತೀರಿಕೊಂಡು 13 ವರ್ಷಗಳಾಗಿವೆ. ಆದರೆ ಸ್ಟೀವ್ ಇರ್ವಿನ್ ಅವರ ಪುತ್ರ ರಾಬರ್ಟ್ ಕ್ಲಾರೆನ್ಸ್ ಇರ್ವಿನ್ ಅಪ್ಪನ ಹಾದಿಯನ್ನೇ ತುಳಿದಿದ್ದಾರೆ. ಇನ್ನು 15 ವರ್ಷದವರಾದ ರಾಬರ್ಟ್ ಕ್ಲಾರೆನ್ಸ್ ಇರ್ವಿನ್ 15 ವರ್ಷಗಳ ಹಿಂದೆ ತಂದೆ ಆಹಾರ ತಿನ್ನಿಸಿದ ಅದೇ ಮೊಸಳೆಗೆ ಆಹಾರ ತಿನ್ನಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.
" ಅಪ್ಪ ಮತ್ತು ನಾನು ಮುರ್ರೇಗೆ ಆಹಾರ ನೀಡುತ್ತಿರುವುದು... ಅದೇ ಸ್ಥಳ, ಅದೇ ಮೊಸಳೆ- 15 ವರ್ಷದ ಅಂತರದಲ್ಲಿ ಎರಡು ಫೋಟೊಗಳು' ಎಂದು ರಾಬರ್ಟ್ ಟ್ವೀಟ್ ಮಾಡಿದ್ದಾರೆ " ಈ ಚಿತ್ರದಲ್ಲಿ ತಂದೆ ಸ್ಟೀವ್ ಅವರಂತೆಯೇ ಉಡುಗೆ ತೊಟ್ಟು, ಅವರಂತೆಯೇ ಕಾಣಿಸುತ್ತಿದ್ದ ರಾಬರ್ಟ್, ಮುರ್ರೆ ಎಂಬ ಮೊಸಳೆಗೆ ಮಾಂಸದ ಆಹಾರ ನೀಡುತ್ತಿದ್ದಾರೆ ಈ ಚಿತ್ರಗಳು ಜಗತ್ತಿನಾದ್ಯಂತ ವೈರಲ್ ಆಗಿದೆ.