ದುಬೈ, ಡಿ. 23(DaijiworldNews/TA): ಶೇಖ್ ಝಯೀದ್ ರಸ್ತೆಯ ಮಿಲೆನೀಯಂ ಪ್ಲಾಝ ಹೋಟೆಲ್ ನ ಸಭಾಂಗಣದಲ್ಲಿ ಯುಎಇಯ ಒಂದು ಸಾವಿರದ ಐದುನೂರುಕ್ಕು ಅಧಿಕ ಬಂಟರು ಸೇರಿ ಯುಎಇ ಬಂಟ್ಸ್ ನ 48 ನೇ ವರ್ಷದ ಕೂಡುಕಟ್ಟ್ "ಭಾವೈಕ್ಯ" ಬಂಟರ ಸಮಾಗಮ ಅದ್ದೂರಿಯಾಗಿ ನಡೆಯಿತು.

48ನೇ ವರ್ಷದ ಕೂಡುಕಟ್ಟ್ ಭಾವೈಕ್ಯ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಪೋಷಕರಾದ ಸರ್ವೋತ್ತಮ ಶೆಟ್ಟಿ,ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ,ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು ಸಂಘಟನಾ ಸಮಿತಿಯ ಮಹಿಳಾ ಸದಸ್ಯೆಯರು ಹಾಗೂ ಸಲಹಾ ಸಮಿತಿಯ ಸದಸ್ಯರು ದೀಪ ಬೆಳಗಿಸಿ ಚಾಲನೆ ನೀಡಿದರು.
ನಂತರ ಶ್ರೀಮತಿ ಸಂಗೀತಾ ಶೆಟ್ಟಿ ತಂಡದವರಿಂದ ಬಂಟ ಗೀತೆ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ಕಲಾವಿದರಿಂದ ಗಣಪತಿ ಸ್ತುತಿಯ ಯಕ್ಷಗಾನ ನೃತ್ಯದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯುಎಇ ಬಂಟ ಬಾಂಧವರಿಂದ ತುಳುನಾಡ ಮಣ್ಣ್ ದ ಮಹಿಮೆ,ಭಾರತದ ಸಂಸ್ಕೃತಿಯ ಪಯಣ,ಬಂಟೆರ್ನ ಐಸಿರ, ಕಿರುಚಿತ್ರ ಸ್ಪರ್ಧೆ ಇಂತಹ ಸ್ಪರ್ಧಾ ಕಾರ್ಯಕ್ರಮ ಒಂದಕ್ಕೊಂದು ಒಂದು ವಿಭಿನ್ನ ರೀತಿಯಲ್ಲಿ ಮೂಡಿ ಬಂತು. ವರ್ಷಂಪ್ರತಿ ಕೊಡಮಾಡುವ ಪ್ರತಿಷ್ಠಿತ "ಬಂಟ ವಿಭೂಷಣ" ಪ್ರಶಸ್ತಿಯನ್ನು ದ.ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ನೀಡಿ ಗೌರವಿಸಲಾಯಿತು.
ನಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ದಂಪತಿಗಳಿಗೆ "ಮಣ್ಣಿನ ಮಗ" ಮತ್ತು ನಟ ವಿವೇಕ್ ಒಬೆರಾಯ್ ರವರಿಗೆ "ತುಳುನಾಡ ಮರ್ಮಯೆ" ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು."ಬಂಟ ಬ್ರಹ್ಮ","ಬಂಟ ಕಲಾ ಮಾಣಿಕ್ಯ"ಮತ್ತು "ಬಂಟ ಸೇವ ರತ್ನ" ಪ್ರಶಸ್ತಿ ಪ್ರದಾನ ಈ ಮರಳು ಭೂಮಿಯಲ್ಲಿ ಕಳೆದ ನಲವತ್ತ ಎಳು ವರ್ಷಗಳಿಂದ ಯುಎಇ ಬಂಟ್ಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತ ಬಂದಿರುವ ಸರ್ವೋತ್ತಮ ಶೆಟ್ಟಿ ದಂಪತಿಗಳಿಗೆ "ಬಂಟ ಬ್ರಹ್ಮ" ಪ್ರಶಸ್ತಿ ನೀಡಿ ಗೌರವಿಸಲಾಯಿತು.
"ಬಂಟ ಕಲಾ ಮಾಣಿಕ್ಯ" ಪ್ರಶಸ್ತಿಯನ್ನು ಮರಳು ಭೂಮಿಯಲ್ಲಿ ಯಕ್ಷಗಾನವನ್ನು ಪೋಷಿಸಿಕೊಂಡು ಬರುತಿರುವ ದಿನೇಶ್ ಶೆಟ್ಟಿ ಕೊಟ್ಟಿಂಜ ದಂಪತಿ ಮತ್ತು ನಾಟಕ ರಂಗದ ನಿರ್ದೇಶಕ ವಿಶ್ವನಾಥ ಶೆಟ್ಟಿ ದಂಪತಿಗಳಿಗೆ ನೀಡಿ ಗೌರವಿಸಲಾಯಿತು."ಬಂಟ ಸೇವ ರತ್ನ" ಪ್ರಶಸ್ತಿಯನ್ನು ಬಾಲಕೃಷ್ಣ ಶೆಟ್ಟಿ ಮಾಡುರುಗುತ್ತು ದಂಪತಿ ಮತ್ತು ವಸಂತ ಶೆಟ್ಟಿಯವರಿಗೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಯುಎಇ ಬಂಟ್ಸ್ ನ ಮಹಾ ಪೋಷಕರಾದ ಬಿ.ಆರ್ ಶೆಟ್ಟಿ,ಸರ್ವೋತ್ತಮ ಶೆಟ್ಟಿ,ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.