ಇಸ್ರೇಲ್, ಜು15(Daijiworld News/SS): ಇಸ್ರೇಲ್ ದೇಶವನ್ನು ನಾಶಗೊಳಿಸಲು ಲೆಬನಾನ್ ಸಮರ್ಥವಾಗಿದೆ ಎಂದು ಲೆಬನಾನ್ ಮೂಲದ ಭಯೋತ್ಪಾದಕನೊಬ್ಬ ನೀಡಿರುವ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಕಿಡಿಕಾರಿದ್ದಾರೆ.
ಭಯೋತ್ಪಾದಕ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು, ಇಸ್ರೇಲ್ ತಂಟೆಗೆ ಬಂದರೆ ಜೋಕೆ ಎಂದು ಎಚ್ಚರಿಸಿದ್ದಾರೆ.
ಇಸ್ರೇಲ್ ಮೇಲೆ ದಾಳಿಯಂತಹ ಮೂರ್ಖ ಕೆಲಸಕ್ಕೆ ಹಿಜ್ಬುಲ್ ಧೈರ್ಯ ತೋರಿದೆ. ನಾವು ಲೆಬನಾನ್ ಮತ್ತು ಹಿಜ್ಬುಲ್ ಹೊಡೆತವನ್ನು ಸಹಿಸುವಷ್ಟು ಸಮರ್ಥರಾಗಿದ್ದೇವೆ ಎಂದು ಸಚಿವ ಸಂಪುಟ ಸಭೆಯಲ್ಲಿ ಹೇಳಿರುವುದಾಗಿ ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
ಹಿಜ್ಬುಲ್ ಮುಖ್ಯಸ್ಥ ಹಸನ್ ನಸ್ರಲ್ಲಾ, ತನ್ನ ಭಾಷಣದಲ್ಲಿ, ಇಸ್ರೇಲ್ ದೇಶವು ಲೆಬನಾನ್ ಮೇಲೆ ದಾಳಿ ಮಾಡುವ ಧೈರ್ಯ ತೋರಿದರೆ, ಇಸ್ರೇಲ್ ನಾಶ ಮಾಡಲು ಶಿಟ್ಟೆ ಸಂಘಟನೆ ಸಮರ್ಥವಾಗಿದೆ ಎಂದು ಹೇಳಿದ್ದನು. ಈ ಹೇಳಿಕೆ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಕಿಡಿಕಾರಿದ್ದಾರೆ. ಮಾತ್ರವಲ್ಲ, ಸ್ರೇಲ್ ತಂಟೆಗೆ ಬಂದರೆ ಜೋಕೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.