ವಾಷಿಂಗ್ಟನ್, ಜ. 08 (DaijiworldNews/AA): ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಬಂಧಿಸಿದ ಬೆನ್ನಲ್ಲೇ, ವೆನೆಜುವೆಲಾವು ಅಮೆರಿಕದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿರುವ ಅವರು, "ನಮ್ಮ ಹೊಸ ತೈಲ ಒಪ್ಪಂದದಿಂದ ಪಡೆಯುವ ಹಣದಿಂದ ವೆನೆಜುವೆಲಾ ಅಮೆರಿಕ ಉತ್ಪಾದನೆ ಮಾಡಿದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು. ನಮ್ಮ ಹೊಸ ತೈಲ ಒಪ್ಪಂದದಿಂದ ಪಡೆಯುವ ಹಣದಿಂದ ವೆನೆಜುವೆಲಾ ಅಮೆರಿಕನ್ ನಿರ್ಮಿತ ಉತ್ಪನ್ನಗಳನ್ನು ಮಾತ್ರ ಖರೀದಿಸಲಿದೆ ಎಂದು ನನಗೆ ತಿಳಿಸಲಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.
"ಈ ಖರೀದಿಗಳಲ್ಲಿ ಅಮೇರಿಕನ್ ಕೃಷಿ ಉತ್ಪನ್ನಗಳು ಮತ್ತು ಅಮೇರಿಕನ್ ನಿರ್ಮಿತ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ವೆನೆಜುವೆಲಾದ ಎಲೆಕ್ಟ್ರಿಕ್ ಗ್ರಿಡ್ ಮತ್ತು ಇಂಧನ ಸೌಲಭ್ಯಗಳನ್ನು ಸುಧಾರಿಸಲು ಉಪಕರಣಗಳು ಸೇರಿವೆ. ವೆನೆಜುವೆಲಾ ಅಮೆರಿಕದದೊಂದಿಗೆ ತಮ್ಮ ಪ್ರಮುಖ ಪಾಲುದಾರರಾಗಿ ವ್ಯವಹಾರ ಮಾಡಲು ಬದ್ಧವಾಗಿದೆ. ಇದು ಬುದ್ಧಿವಂತ ಆಯ್ಕೆಯಾಗಿದ್ದು ಇದರಿಂದ ವೆನೆಜುವೆಲಾ ಮತ್ತು ಅಮೆರಿಕದ ಜನರಿಗೆ ತುಂಬಾ ಒಳ್ಳೆಯದು" ಎಂದು ತಿಳಿಸಿದ್ದಾರೆ.