ವಾಷಿಂಗ್ಟನ್, ಜು 19 (Daijiworld News/RD): ವಿಶ್ವದಾದ್ಯಂತ, ಇತ್ತೀಚೆಗೆ ಜನರು ತಮ್ಮ ಫೋಟೋಗಳನ್ನು ಫೇಸ್ ಆಪ್ಗೆ ಹಾಕಿ ವಯಸ್ಸಾದ ಮೇಲೆ ತಾವು ಹೇಗೆ ಕಾಣಿಸುತ್ತಿದ್ದೇವೆ ಎಂಬುದನ್ನು ನೋಡಿಕೊಂಡು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಈ ಫೇಸ್ ಆಪ್ಗಳು ಪೋಟೋ ಅಪ್ಲೋಡ್ ಮಾಡುವುದರ ಜೊತೆಗೆ ಮಾಹಿತಿ ಸೋರಿಕೆಯಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ.
ರಷ್ಯಾ ಮೂಲದ ಫೇಸ್ಆಪ್ ಇದಾಗಿದ್ದು, ಇದರಿಂದಾಗಿ ಡೇಟಾ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಅಮೇರಿಕದ ನ್ಯೂಯಾರ್ಕ್ ಡೆಮಾಕ್ರಾಟ್ ಸಂಸದ ಚಕ್ ಶುಮರ್ ಇದರ ಕುರಿತು ತನಿಖೆ ನಡೆಸಬೇಕು ಮನವಿ ಮಾಡಿದ್ದಾರೆ.
ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ವಯಸ್ಸಾದ ಚಿತ್ರವನ್ನು ಬಿಂಬಿಸುವ ಮಾಂತ್ರಿಕ ಆಪ್ಗಳು ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತಿವೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಅಪ್ಲೋಡ್ ಮಾಡಿದ ಫೋಟೋಗಳನ್ನು ಫೋಟೋ ಆಪ್ ಕ್ಲೌಡ್ಗೆ ಅಪ್ಲೋಡ್ ಮಾಡುತ್ತಿದೆ ಮತ್ತು ಈ ಆಪ್ ಡೌನ್ಲೋಡ್ ಮಾಡಿಕೊಳ್ಳುವವರ ಎಲ್ಲಾ ಫೋಟೋ ಮತ್ತು ಮಾಹಿತಿಯನ್ನು ಪಡೆದುಕೊಳ್ಳುತ್ತದೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡಿ, ಭಾರಿ ವಿವಾದವನ್ನು ಸೃಷ್ಟಿಸಿದೆ.
ಈ ಹಿಂದೆ 2017ರಲ್ಲಿ ಇದೇ ರೀತಿಯ ಫೋಟೋದಲ್ಲಿ ಜನಾಂಗೀಯತೆಯನ್ನು ಬದಲಿಸುವ ಫಿಲ್ಟರ್ ಅಳವಡಿಸಿದ್ದ ಆಪ್ ಬಂದಿದ್ದು, ಇದರ ವಿರುದ್ಧ ಬಂದ ಟೀಕೆಗೆ ಫಿಲ್ಟರ್ ಅನ್ನು ಕಂಪನಿ ಹಿಂಪಡೆಯಿತು.