ವಾಷಿಂಗ್ಟನ್, ಫೆ. 14 (DaijiworldNews/AK): ಪ್ರತ್ಯೇಕತಾವಾದಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹತ್ಯೆಗೆ ತಾನೇ ಸಂಚು ರೂಪಿಸಿದ್ದಾಗಿ ಭಾರತೀಯ ಮೂಲದ ವ್ಯಕ್ತಿ ಅಮೆರಿಕದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

54 ವರ್ಷದ ನಿಖಿಲ್ ಗುಪ್ತಾ ಕೊಲೆಗೆ ಸಂಚು ರೂಪಿಸಿದ್ದ, ಬಾಡಿಗೆದಾರರು ಹಾಗೂ ಹಣ ವರ್ಗಾವಣೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ನಿಖಿಲ್ ಗುಪ್ತನನ್ನ ದೋಷಿ ಎಂದು ಪರಿಗಣಿಸಿದ್ದು, ಮೇ 29 ರಂದು ಶಿಕ್ಷೆ ವಿಧಿಸುವುದಾಗಿ ಮ್ಯಾನ್ಹ್ಯಾಟನ್ನಲ್ಲಿರುವ ಫೆಡರಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಹೇಳಿದೆ. ಸದ್ಯದ ಮಾಹಿತಿ ಪ್ರಕಾರ, ನಿಖಿಲ್ ಗುಪ್ತಾ 40 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯೆಯಿದೆ ಎಂದು ವರದಿಯಾಗಿದೆ.
ಯುಎಸ್ ಪ್ರಾಸಿಕ್ಯೂಟರ್ಗಳ ಪ್ರಕಾರ, ಗುಪ್ತಾ ಭಾರತೀಯ ಸರ್ಕಾರಿ ಉದ್ಯೋಗಿಯ ನಿರ್ದೇಶನದ ಮೇರೆಗೆ ಪನ್ನುನ್ ಹತ್ಯೆಗೆ ಸಂಚು ನಡೆದಿತ್ತು . 2023 ರಲ್ಲಿ ನಿಖಿಲ್ ಗುಪ್ತಾ ರನ್ನ ವಿಕಾಸ್ ಯಾದವ್ ಎಂಬ ಅಧಿಕಾರಿ ನೇಮಕ ಮಾಡಿಕೊಂಡಿದ್ದರು. ವಿಕಾಸ್ ನಿರ್ದೇಶನದ ಮೇರೆಗೆ ಅಮೆರಿಕದಲ್ಲಿ ಪನ್ನುನ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. 1,00,000 ಡಾಲರ್ ಸುಪಾರಿಗೆ ಮಾತುಕತೆ ನಡೆಸಿ, 15,000 ಡಾಲರ್ನಷ್ಟು ಹಣವನ್ನ ಅಡ್ವಾನ್ಸ್ ಕೂಡ ಕೊಡಲಾಗಿತ್ತು. ಬಳಿಕ ಪನ್ನು ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಶೂಟರ್ಗೆ ನೀಡಲಾಗಿತ್ತು. ಇನ್ನೇನು ಹತ್ಯೆಗೆ ಮುಂದಾಗಬೇಕು ಅನ್ನುವಾಗಲೇ ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ ಮತ್ತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಈ ಪ್ರಕರಣವನ್ನ ಭೇದಿಸಿತು.