ವಾಷಿಂಗ್ಟನ್, ಫೆ. 20 (DaijiworldNews/AA): ನನಗೆ ಯುವ, ಸುಂದರ ಪುರುಷರು ಇಷ್ಟವಿಲ್ಲ. ಮಹಿಳೆಯರು - ನನಗೆ ಇಷ್ಟ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ತಮ್ಮ ಹೊಸ ಬೋರ್ಡ್ ಆಫ್ ಪೀಸ್ ನ್ನು ಉದ್ಘಾಟಿಸುವ ವೇಳೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಯುವಕರಂತೆ ಸುಂದರವಾಗಿರುವುದು ಯಾವಾಗಲೂ ಚೆನ್ನಾಗಿದೆ. ಆದರೆ ಅದರಿಂದ ನಾವು ನಿಮಗೆ ಇಷ್ಟಪಡಲೇಬೇಕು ಎಂದಲ್ಲ. ಪುರುಷರಲ್ಲಿ ನನಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
2025 ರ ಮಿಲಿಟರಿ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಿದ್ದೆ ಎಂದು ಪುನರುಚ್ಚರಿಸಿರುವ ಟ್ರಂಪ್, "ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರು ಯುದ್ಧವನ್ನು ನಿಲ್ಲಿಸದಿದ್ದರೆ, ಅವರ ಮೇಲೆ 200% ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ. ತಮ್ಮ ಶಾಂತಿ ಮಂಡಳಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್ ಒಂದು ಹೆಜ್ಜೆ ಮುಂದೆ ಹೋಗಿ, ಯುದ್ಧದ ಸಮಯದಲ್ಲಿ 11 ಜೆಟ್ಗಳನ್ನು ಹೊಡೆದುರುಳಿಸಲಾಯಿತು" ಎಂದರು.