ಬಿಜಿಂಗ್ ಆ2 (Daijiworld News/RD): ಸಾಂಸ್ಕೃತಿಕ ಕಲೆ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ಯ ನೀಡುವ ದೇಶ ಚೀನಾ ಆಗಿದ್ದು, ಹೀಗಾಗಿ ಚೀನಾ ಕಮ್ಯೂನಿಸ್ಟ್ ಸರ್ಕಾರ, ಅರೆಬಿಕ್ ಭಾಷೆಯಲ್ಲಿರುವ ಎಲ್ಲಾ ನಾಮಫಲಕಗಳನ್ನು ತೆಗೆಯುವಂತೆ ರಾಜಧಾನಿ ಬಿಜಿಂಗ್ನಲ್ಲಿರುವ ಹೊಟೇಲ್ಗಳಿಗೆ ಖಡಕ್ ವಾರ್ನಿಂಗ್ ನೀಡಿದೆ.
ಬೀಜಿಂಗ್ ಈ ಹೋಟೇಲ್ ಇಸ್ಲಾಂ ಧರ್ಮದಾಗಿದ್ದು, ಹೋಟೆಲ್ನ ನಾಮಫಲಕಗಳ ಮೇಲಿರುವ ಅರೆಬಿಕ್ ಭಾಷೆಯ ಪದಗಳು, ಇಸ್ಲಾಂಗೆ ಸಂಬಂಧಿಸಿದ ಚಿಹ್ನೆಗಳನ್ನು ಹೊಂದಿದ್ದು, ಇದನ್ನು ತೆಗೆಯುವಂತೆ ಬಿಜಿಂಗ್ ಸ್ಥಳೀಯ ಆಡಳಿತ ಆದೇಶ ನೀಡಿದೆ. ಅಷ್ಟೇ ಅಲ್ಲದೇ ಹಲಾಲ್ ಎಂಬ ಶಬ್ಧ ಬಳಸಿರುವ ಎಲ್ಲಾ ನಾಮಫಲಕಗಳನ್ನು ಬದಲಾಯಿಸುವಂತೆಯೂ ಆದೇಶ ನೀಡಲಾಗಿದೆ.
ಇದೀಗ ಚೀನ ದೇಶವು ಮುಸ್ಲಿಂ ಸಮುದಾಯದ ಮೇಲೆ ಕಣ್ಣಿಟ್ಟಿದ್ದು, ದೇಶದಲ್ಲಿ ಸುಮಾರು 20 ಮಿಲಿಯನ್ ಮುಸ್ಲಿಂ ಸಮುದಾಯವನ್ನು ಒಳಗೊಂಡಿದೆ. ಪಾಶ್ಚಾತ್ಯ ಸಂಸ್ಕೃತಿಯಿಂದ ದೇಶದ ಸಂಸ್ಕೃತಿ ನಾಶವಾಗುತ್ತದೆ ಎಂದು ಹೇಳುವ ಚೀನಾ ಇಸ್ಲಾಂನ ವಿದೇಶಿ ಸಂಸ್ಕೃತಿಯನ್ನು ನಮ್ಮ ದೇಶದಲ್ಲಿ ಅಳವಡಿಸುತ್ತಾ ಹೋಗುತ್ತದೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚೀನಾ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಚೀನಾದ ಉಯಿಗರ್ ಮುಸ್ಲಿಂ ಸಮುದಾಯ ಹಾಗೂ ಸ್ಥಳೀಯ ಹಾನ್ ಸಮುದಾಯದ ನಡುವೆ ಹಲವಾರು ಬಾರಿ ಜಗಳ ಉಂಟಾಗಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಚೀನಾ ಸರ್ಕಾರ ಅಲ್ಪಸಂಖ್ಯಾತ ಸಮುದಾಯವನ್ನು ಕಡಿಮೆಗೊಳಿಸುವ ಸಲುವಾಗಿ ಕೆಲವು ಯೋಜನೆಗಳನ್ನು ರೂಪಿಸಿದೆ ಎನ್ನಲಾಗಿದೆ.