ವಾಷಿಂಗ್ಟನ್, ಫೆ. 25 (DaijiworldNews/AA): ನನ್ನ ಮಧ್ಯಸ್ಥಿಕೆ ಇಲ್ಲದೇ ಇದ್ದಿದ್ರೆ, ಭಾರತ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ಪ್ರಧಾನಿ ಸಾಯುತ್ತಿದ್ದರು ಅಂತ 3.5 ಕೋಟಿ ಜನ ಹೇಳ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ತಮ್ಮ 2ನೇ ಅವಧಿಯ ಸರ್ಕಾರಕ್ಕೆ 1 ವರ್ಷ ತುಂಬಿದ ಹಿನ್ನೆಲೆ 2026ರ ರಾಷ್ಟ್ರೀಯ ಒಕ್ಕೂಟವನ್ನುದ್ದೇಶಿಸಿ ಅವರು ಮಾತನಾಡಿದ ಅವರು, "ನಮ್ಮ ರಾಷ್ಟ್ರವು ಗತವೈಭವಕ್ಕೆ ಮರಳಿದೆ. ಹಿಂದೆಂದಿಗಿಂತಲೂ ದೊಡ್ಡ, ಉತ್ತಮ, ಶ್ರೀಮಂತ ಮತ್ತು ಬಲಶಾಲಿ ದೇಶವಾಗಿದೆ. ನನ್ನ ಮೊದಲ 10 ತಿಂಗಳ ಅವಧಿಯಲ್ಲೇ ನಾನು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದ್ರಲ್ಲೂ ಪಾಕಿಸ್ತಾನ ಮತ್ತು ಭಾರತದ್ದು ಪರವಾಣು ಯುದ್ಧವಾಗಿರುತ್ತಿತ್ತು. ನಾನು ಮಧ್ಯಸ್ಥಿಕೆ ವಹಿಸದೇ ಇದ್ದಿದ್ದರೇ ಪಾಕಿಸ್ತಾನದ ಪ್ರಧಾನಿ ಸಾಯುತ್ತಿದ್ದರು ಅಂತ 3.5 ಕೋಟಿ ಜನ ಹೇಳ್ತಿದ್ದಾರೆ" ಎಂದರು.
"ಕಳೆದ 9 ತಿಂಗಳಲ್ಲಿ ಅಮೆರಿಕಕ್ಕೆ ಯಾರೊಬ್ಬರೂ ಅಕ್ರಮವಾಗಿ ಪ್ರವೇಶಿಸಿಲ್ಲ. ಅಕ್ರಮ ವಲಸಿಗರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಬೇರೆ ದೇಶಗಳ ಜನರನ್ನು ಕಾನೂನುಬದ್ದವಾಗಿ ಮಾತ್ರ ಅಮೆರಿಕಕ್ಕೆ ಪ್ರವೇಶಿಸಲು ಅನುಮತಿಸಲಾಗುತ್ತಿದೆ" ಎಂದು ಹೇಳಿದರು.
"ಅಮೆರಿಕಕ್ಕೆ ಸ್ವಾತಂತ್ರ್ಯ ಸಿಕ್ಕು ಈ ಜುಲೈ 4 ಕ್ಕೆ ಎರಡೂವರೆ ಶತಮಾನ ಕಳೆಯುತ್ತಿದೆ. ಆ ಹೊತ್ತಿಗೆ ನಾವು ಭೂಮಿಯ ಮೇಲೆ ಅತ್ಯಂತ ಅದ್ಭುತ, ಅಸಾಧಾರಣ. ಪ್ರಗತಿಪರ ರಾಷ್ಟ್ರವಾಗಿ ಹೊರಹೊಮ್ಮುತ್ತೇವೆ. ಈ ವರೆಗೂ ಕಾಣದ್ದನ್ನ ದೇಶದ ಜನ ಕಾಣುತ್ತಾರೆ. ಅಲ್ಲದೇ ಈ ಹಿಂದೆ ದೇಶದಲ್ಲಿ ಹತ್ಯೆ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿತ್ತು. ಈಗ ಕೊಲೆ ಪ್ರಮಾಣವು ಇತಿಹಾಸದಲ್ಲಿ ಅತಿದೊಡ್ಡ ಕುಸಿತ ಕಂಡಿದೆ" ಎಂದು ತಿಳಿಸಿದರು.