ಇಸ್ಲಾಮಾಬಾದ್, ಮಾ. 22 (DaijiworldNews/TA): ಪಾಕಿಸ್ತಾನದ ಮುರಿಯ್ಕೆ ಪ್ರದೇಶದ ಮರ್ಕಝ್ ತೈಬಾ ಕೇಂದ್ರದಲ್ಲಿ ಲಷ್ಕರ್-ಎ-ತೈಬಾ (ಎಲ್ಇಟಿ) ಕಮಾಂಡರ್ ಬಿಲಾಲ್ ಆರಿಫ್ ಸಲಾಫಿ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ವರದಿಗಳ ಪ್ರಕಾರ, ಗುಂಡು ಹಾರಿಸುವುದರ ಜೊತೆಗೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದಲೂ ದಾಳಿ ನಡೆಸಿದ್ದಾರೆ. ಈ ಘಟನೆ ಈದ್ ಪ್ರಾರ್ಥನೆಯ ಕೆಲವೇ ಕ್ಷಣಗಳ ಬಳಿಕ ನಡೆದಿದೆ ಎನ್ನಲಾಗಿದೆ.
ಬಿಲಾಲ್ ಆರಿಫ್ ಸಲಾಫಿ ಲಷ್ಕರ್-ಎ-ತೊಯ್ಬಾದ ಪ್ರಮುಖ ಕಮಾಂಡರ್ ಆಗಿದ್ದಾನೆ. ದಾಳಿಯ ಹಿಂದೆ ಇರುವ ಕಾರಣ ಮತ್ತು ಆರೋಪಿಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.