ವಾಷಿಂಗ್ಟನ್, ಮಾ. 22 (DaijiworldNews/AA): ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಇರಾನ್ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ? ಬದುಕಿದ್ದಾರಾ? ಎಂದು ಅಮೆರಿಕ ಪ್ರಶ್ನೆ ಮಾಡಿದೆ.

ಮೊಜ್ತಾಬಾ ಖಮೇನಿ ಅನುಪಸ್ಥಿತಿಯಲ್ಲಿ ಇರಾನ್ ಆಡಳಿತ ನಡೆಯುತ್ತಿದೆ. ದಿನಾಂಕ ಇಲ್ಲದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಈಗಾಗಲೇ ಇರಾನ್ನ ಐವರು ಉನ್ನತ ನಾಯಕರು ಹತ್ಯೆ ಆಗಿದ್ದಾರೆ. ಇಷ್ಟಾದರೂ ಸಾರ್ವಜನಿಕವಾಗಿ ಕಾಣಿಸಿಲ್ಲ ಎಂದು ಅಮೆರಿಕ ಗುಪ್ತಚರ ಪಡೆಗಳು ತಿಳಿಸಿವೆ.
ಫ್ರೆಬ್ರವರಿ 28 ರಂದು ಆಯಾತುಲ್ಲಾ ಅಲಿ ಖಮೇನಿ ಹತ್ಯೆ ಬಳಿಕ ಮಾರ್ಚ್ 9 ರಂದು ಮೊಜ್ತಾಬಾ ಖಮೇನಿ ಅಧಿಕಾರ ವಹಿಸಿಕೊಂಡಿದ್ದರು. ಮಾರ್ಚ್ 12 ರಂದು ಸಾರ್ವಜನಿಕ ಹೇಳಿಕೆ ಮತ್ತು ಮಾರ್ಚ್ 20 ರಂದು ಸಂದೇಶ ರವಾನಿಸಿದ್ದರು. ಇದಾದ ಬಳಿಕ ಇದುವರೆಗೂ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಇನ್ನು ಅಮೆರಿಕ ಪ್ರಶ್ನೆಗೆ ಉತ್ತರಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಿ, "ಒಬ್ಬ ವ್ಯಕ್ತಿಯ ಉಪಸ್ಥಿತಿ ಅಥವಾ ಅನುಪಸ್ಥಿತಿ ಇರಾನ್ ರಾಜಕೀಯ, ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.