ಪಾಕಿಸ್ತಾನ,ಆ.12(Daijiworld News/RD): ಪಾಕಿಸ್ತಾನದ ಆರ್ಥಿಕ ಸ್ಥಿತಿ ಕಂಗೆಟ್ಟಿದ್ದು, ಇದಕ್ಕೆ ನಿದರ್ಶನದಂತೆ ಈಗ ಟೋಮಾಟೋ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜನರು ದಿನನಿತ್ಯದ ಆಹಾರಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಂದರೆ, ಪಾಕಿಸ್ತಾನದಲ್ಲಿ ಟೊಮಾಟೋ ಖರೀದಿಸುವುವಾಗ ಕಣ್ಣೀರಿಡುತ್ತಿದ್ದಾರೆ. ರೋಟಿ, ನಾನ್ ಬೆಲೆಯೂ ಏರಿಕೆಯಾಗಿದ್ದು, ಈ ನಡುವೆ ಟೊಮಾಟೋ ದರ ಸಹ ಹೆಚ್ಚಿದೆ. ಪ್ರತಿ ಕೆ.ಜಿ ಟೊಮಾಟೊ ಬೆಲೆ 300 ರೂಪಾಯಿ ಆಗಿದ್ದು, ಇದರೊಟ್ಟಿಗೆ ಈರುಳ್ಳಿ, ಸೇರಿದಂತೆ ಹಸಿ ತರಕಾರಿಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಎಲ್ಲಾ ವಸ್ತುಗಳನ್ನು ಪಾಕಿಸ್ತಾನ ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದು. ಭಾರತದೊಂದಿಗೆ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದು, ಇದರ ಪರಿಣಾಮವಾಗಿ ಪಾಕ್ ನಲ್ಲಿ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ.
ಈಗಾಗಲೇ ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತ, ಇದರ ವಿರುದ್ದ ಪಾಕಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇಷ್ಟು ಮಾತ್ರವಲ್ಲದೆ ಈ ನಿರ್ಣಯದ ಬಗ್ಗೆ ವಿಶ್ವಸಂಸ್ಥೆಗೆ ಮನವಿ ಮಾಡಿತ್ತು. ಆದರೆ ಈ ಮನವಿ ವಿಶ್ವಸಂಸ್ಥೆ ಪರಿಗಣಿಸದೆ ಜಗತಿಕ ಮಟ್ಟದಲ್ಲಿ ಮುಖಭಂಗ ಎದುರಿಸಿತ್ತು. ಈ ಎಲ್ಲಾ ಅವಮಾನದ ನಡುವೆಯು ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಅವರನ್ನು ಹೊರಹಾಕಿದೆ. ಈ ಎಲ್ಲಾ ತಪ್ಪಿಗೆ ಪಾಕ್ ತಕ್ಕ ಪಾಠ ಎಂಬಂತೆ ಆಹಾರಕ್ಕಾಗಿ ಇನ್ನೊಬ್ಬರನ್ನು ಅಂಗಲಾಚುತ್ತಿದೆ.