ವಾಷಿಂಗ್ಟನ್, ಆ.13(Daijiworld News/SS): ಕಾಶ್ಮೀರ ಮಧ್ಯಸ್ಥಿಕೆ ವಿಷಯವನ್ನು ಡೊನಾಲ್ಡ್ ಟ್ರಂಪ್ ಕೈಬಿಡುವುದಾಗಿ ಭಾರತೀಯ ರಾಯಾಭಾರಿ ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ರಾಯಾಭಾರಿ ಅಧಿಕಾರಿ ಹರ್ಷ ವರ್ಧನ್ ಶ್ರಿಂಗ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, ಕಾಶ್ಮೀರ ಮಧ್ಯಸ್ಥಿಕೆ ವಿಷಯವನ್ನು ಕೈಬಿಡುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆಂದು ತಿಳಿಸಿದ್ದಾರೆ.
ಮಧ್ಯಸ್ಥಿಕೆ ಇಲ್ಲ, ಆದರೆ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದು ಅಮೆರಿಕದ ದಶಕಗಳ ನಿಲುವಾಗಿದೆ. ಅಮೆರಿಕ ಮಧ್ಯಸ್ಥಿಕೆ ವಹಿಸುವುದು ಭಾರತ-ಪಾಕಿಸ್ತಾನದ ಮೇಲೆ ಅವಲಂಬಿಸಿದೆ. ಭಾರತ ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ಅಗತ್ಯವಿಲ್ಲವೆಂದು ಹೇಳಿದ್ದು, ಆ ವಿಷಯವನ್ನು ಕೈಬಿಡುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ ಎಂದು ಶ್ರಿಂಗ್ಲಾ ತಿಳಿಸಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶ್ವೇತ ಭವನದಲ್ಲಿ ಜು.22 ರಂದು ಟ್ರಂಪ್ ಜೊತೆ ಮಾತನಾಡಿದ್ದಾಗ, ಡೊನಾಲ್ಡ್ ಟ್ರಂಪ್ ಕಾಶ್ಮೀರ ವಿಷಯದ ಮಧ್ಯಸ್ಥಿಕೆಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. ಆದರೆ ಟ್ರಂಪ್ ಹೇಳಿಕೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು.