ವಾಷಿಂಗ್ಟನ್, ಜೂ. 22 (DaijiworldNews/AA): ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ವಲಸೆ ಮತ್ತು ಇಂಧನ ನೀತಿಗಳಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು, ಅವರು ಶೀಘ್ರದಲ್ಲೇ ರಾಜೀನಾಮೆ ನೀಡಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ 'ಟ್ರೂತ್ ಸೋಶಿಯಲ್'ನಲ್ಲಿ ಪೋಸ್ಟ್ ಹಾಕಿರುವ ಟ್ರಂಪ್, ಸುದ್ದಿ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿರುವ ಅವರು, ಪ್ರಧಾನಿ ಸ್ಟಾರ್ಮರ್ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ನಾಯಕತ್ವಕ್ಕೆ ಅವರದೇ ಪಕ್ಷದ ಆಂಡಿ ಬರ್ನ್ಹ್ಯಾಮ್ ಪ್ರತಿಸ್ಪರ್ಧಿಯಾಗಿದ್ದಾರೆ. ಆಂಡಿ ಬರ್ನ್ಹ್ಯಾಮ್ ಇತ್ತೀಚೆಗೆ ಸಂಸತ್ತಿನಲ್ಲಿ ಸ್ಥಾನ ಗೆದ್ದಿರುವುದು ಪ್ರಧಾನಿ ಸ್ಟಾರ್ಮರ್ ಅವರ ಹುದ್ದೆಗೆ ಕುತ್ತಾಗಿದೆ.
ಅಮೆರಿಕ ಪಡೆಗಳಿಗೆ ಸಹಕರಿಸದ ಬ್ರಿಟನ್, ಉಭಯ ದೇಶಗಳ ನಡುವಿನ ಐತಿಹಾಸಿಕ ನಿಕಟ ಸಂಬಂಧವನ್ನು ಹಾಳುಮಾಡಿದೆ. ನಾವು ಯುದ್ಧದಲ್ಲಿ ಗೆದ್ದ ನಂತರ ಬಂದು ನಮ್ಮ ಜೊತೆ ಕೈಜೋಡಿಸುವ ಅಂತಹ ನಾಯಕರು ನಮಗೆ ಬೇಡ ಎಂದು ಟ್ರಂಪ್ ಬ್ರಿಟನ್ ಪ್ರಧಾನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.