ಟೆಹ್ರಾನ್, ಜೂ. 23 (DaijiworldNews/AA): ಹಾರ್ಮುಜ್ ಜಲಸಂಧಿಯ ಮೇಲೆ ನಮಗೆ ಸಂಪೂರ್ಣ ನಿಯಂತ್ರಣವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಜಲಸಂಧಿ ಇನ್ನು ಮುಂದೆ ಇರಾನ್ ನಿಯಮಗಳಂತೆಯೇ ನಡೆಯಲಿದೆ ಎಂದು ಇರಾನ್ ತಿರುಗೇಟು ನೀಡಿದೆ.

ಸ್ವಿಟ್ಜರ್ಲ್ಯಾಂಡ್ ಮಾತುಕತೆಯಿಂದ ಹಿಂತಿರುಗಿದ ಇರಾನ್ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್ ಮಾತನಾಡಿ, "ಹಾರ್ಮುಜ್ ಜಲಸಂಧಿಯ ನಿರ್ವಹಣೆ ಯುದ್ಧದ ಮುಂಚೆ ಇದ್ದ ಸ್ಥಿತಿಗೆ ಎಂದಿಗೂ ಮರಳುವುದಿಲ್ಲ. ಇನ್ನು ಮುಂದೆ ಅದು ಇರಾನಿನ ವ್ಯವಸ್ಥೆ ಹಾಗೂ ನಿಯಮಗಳ ಅಡಿಯಲ್ಲೇ ಕಾರ್ಯನಿರ್ವಹಿಸಲಿದೆ. ಇರಾನ್ ಎಂದಿಗೂ ಅಮೆರಿಕನ್ನರನ್ನು ನಂಬಿಲ್ಲ ಮತ್ತು ಮುಂದೆಯೂ ನಂಬುವುದಿಲ್ಲ" ಎಂದು ಅಮೆರಿಕ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳವಾರ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ನಮ್ಮ ಶಕ್ತಿಶಾಲಿ ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ. ನಾವು ವಿಧಿಸಿದ್ದ ಆರ್ಥಿಕ ದಿಗ್ಬಂಧನವು ಬಾಂಬ್ಗಳನ್ನು ಬೀಳಿಸುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಜಲಮಾರ್ಗವನ್ನು ಮುಕ್ತವಾಗಿಡಲು ನಾವು ಯಶಸ್ವಿಯಾಗಿದ್ದೇವೆ" ಎಂದು ವಾಗ್ದಾಳಿ ನಡೆಸಿದ್ದಾರೆ.