ಗೌಟೆಂಗ್, ಸೆ.27 (DaijiworldNews/AA): ಜೋಹಾನ್ಸ್ಬರ್ಗ್ನ ನೈಋತ್ಯದಲ್ಲಿರುವ ವೆಡೆಲಾದ ವೆಸ್ಟ್ ರಾಂಡ್ ಪ್ರದೇಶದಲ್ಲಿನ ಬಾರ್ವೊಂದರಲ್ಲಿ ತಡರಾತ್ರಿ ಭೀಕರ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 17 ಜನರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ.

ಗೌಟೆಂಗ್ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ 9:30 ರ ಸುಮಾರಿಗೆ ಈ ಘಟನೆ ನಡೆದಿದೆ. ದಾಳಿ ನಡೆಸಲು ಬಂದಿದ್ದ ಶಂಕಿತರು ಎಕೆ-47 ರೈಫಲ್ಗಳು ಮತ್ತು ಪಿಸ್ತೂಲ್ಗಳನ್ನ ಹೊಂದಿದ್ದರು ಎನ್ನಲಾಗಿದೆ. ಇನು ದಾಳಿಯ ನಿಖರ ಕಾರಣ ತಿಳಿದುಬಂದಿಲ್ಲ ಎಂದು ದಕ್ಷಿಣ ಆಫ್ರಿಕಾದ ಪೊಲೀಸ್ ಇಲಾಖೆ ತಿಳಿಸಿದೆ.
ಶಂಕಿತರು ಬಾರ್ ಹೊರಗಡೆ ಮದ್ಯಪಾನ ಮಾಡುತ್ತಿದ್ದ ಗ್ರಾಹಕರ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಒಳಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ 15 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.