ದುಬೈ, ಅ.01 (DaijiworldNews/AK): ನೃತಾ ವೈಭವ–2026 ಯು.ಎ.ಇ.ಯಲ್ಲಿ ಹಲವು ವರ್ಷಗಳಿಂದ ಭಾರತೀಯ ನಾಟ್ಯ ಶೈಲಿಯ ಮೂಲಕ ಕಲಾಸಕ್ತರ ಮನಗೆದ್ದಿರುವ ವಿದೂಷಿ ರೂಪಾ ಕಿರಣ್ ಅವರ ಆಯೋಜನೆಯಲ್ಲಿ “ನೃತಾ ವೈಭವ –2026” ಕಾರ್ಯಕ್ರಮವು ಅಜ್ಮಾನ್ನ ನಾರ್ತ್ ಗೇಟ್ ಬ್ರಿಟಿಷ್ ಸ್ಕೂಲ್ನಲ್ಲಿ ಅಕ್ಟೋಬರ್ 4, 2026ರಂದು ಭಾನುವಾರ ಸಂಜೆ 4:00 ರಿಂದ ನಡೆಯಲಿದೆ.



ಯು.ಎ.ಇ.ಯ ವಿವಿಧ ಸಂಘ-ಸಂಸ್ಥೆಗಳೊಂದಿಗೆ ನಿರಂತರವಾಗಿ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ರೂಪಾ ಕಿರಣ್ ಅವರು, ತಮ್ಮ ಶಿಷ್ಯ ಬಳಗದೊಂದಿಗೆ ಭಾರತೀಯ ನೃತ್ಯ ಪರಂಪರೆಯನ್ನು ಪಸರಿಸುತ್ತಿದ್ದಾರೆ.
“ನೃತಾ ಶಕ್ತಿ – Soul of Dance” ಸಂಸ್ಥೆಯ ಸುಮಾರು 60ರಿಂದ 70 ಮಂದಿ ಶಿಷ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾನಪದ ಹಾಗೂ ಶಾಸ್ತ್ರೀಯ ನೃತ್ಯ ಶೈಲಿಗಳ ವೈವಿಧ್ಯಮಯ ಪ್ರದರ್ಶನವನ್ನು ನೀಡಲಿದ್ದಾರೆ.
ಭಾರತೀಯ ಕಲೆ, ಸಂಸ್ಕೃತಿ ಮತ್ತು ನೃತ್ಯದ ಸೊಬಗನ್ನು ಆಸ್ವಾದಿಸಲು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.