ನ್ಯೂಯಾರ್ಕ್, ಸೆ.28(Daijiworld News/SS): 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು "ನಾನು ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದೇನೆ" ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ದೂರಿದ್ದಾರೆ.
ವಿಶ್ವ ಸಂಸ್ಥೆಯ 74 ನೇ ಮಹಾ ಅಧಿವೇಶನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದ್ದಾರೆ. ಈ ವೇಳೆ, ಕಾಶ್ಮೀರ ವಿಷಯವನ್ನು ಮತ್ತೆ ಕೆದಕಿ ಭಾರತ ಮುಸ್ಲಿಮರನ್ನು ತೀವ್ರಗಾಮಿಗಳನ್ನಾಗಿ ಮಾಡುತ್ತಿರುವುದಾಗಿ ಆಕ್ಷೇಪ ವ್ಯಕ್ತಪಡಿಸಿದ ಅವರು, ನಾವು ಶಾಂತಿಯನ್ನು ತರಲು ಪ್ರಯತ್ನಿಸುತ್ತಿದ್ದೇವೆ. ಭಾರತದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದ್ದಾರೆ.
ಯುದ್ದ ನಡೆದರೇ ಏನು ಬೇಕಾದರೂ ಸಂಭವಿಸಬಹುದು. ಒಂದು ರಾಷ್ಟ್ರ ತನಗಿಂತ ಏಳು ಪಟ್ಟು ಸಣ್ಣದಾದ ದೇಶದ ಜೊತೆಗೆ ಹೋರಾಡಿದರೇ ಅದಕ್ಕಿರುವುದು ಕೇವಲ ಎರಡು ಆಯ್ಕೆ. ಒಂದು ಶರಣಾಗುವುದು ಇಲ್ಲವೆ ಮರು ಯುದ್ದ ಮಾಡುವುದು. ಆದರೇ ಅದರ ಪರಿಣಾಮ ಮಾತ್ರ ಜಗತ್ತಿನ ಇತರ ರಾಷ್ಟ್ರಗಳ ಮೇಲೂ ಬೀರುತ್ತದೆ ಎಂದು ಹೇಳಿದರು.
ಎರಡು ಪರಮಾಣು ಸಶಸ್ತ್ರ ರಾಷ್ಟ್ರಗಳು ಹೋರಾಡಿದರೇ ಅದರ ಪರಿಣಾಮ ಜಗತ್ತಿನ ಮೇಲೆ ಬೀಳುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಅವರು, ಪ್ರಧಾನಿ ಮೋದಿಯವರ 2019ರ ಲೋಕಸಭಾ ಚುನಾವಣಾ ಪ್ರಚಾರ ಕೇವಲ ಸುಳ್ಳುಗಳಿಂದ ಕೂಡಿತ್ತು. ಪುಲ್ವಾಮ ದಾಳಿ ನಡೆದಾಗ ಭಾರತ ನಮ್ಮನ್ನು ದೂಷಿಸಿತು. ಆದರೇ ಅದಕ್ಕೆ ಪುರಾವೇ ನೀಡಲಿಲ್ಲ ಎಂದು ತಿಳಿಸಿದ್ದಾರೆ.