ದುಬೈ, ಅ 03 (DaijiworldNews/SM): ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೊಲ್ಲಂ ಮೂಲದ 36 ವರ್ಷದ ಸುಜಾ ಥಾಂಕಾಚನ್ ಅವರ ಕನಸು ನನಸಾಗುವ ಸಂದರ್ಭ ಬಂದಿದೆ. ಚಾಲಕ ಹುದ್ದೆಗೆ ಬಡ್ತಿ ಪಡೆಯುವ ಸಮಯ ಎದುರಾಗಿದೆ.
ಬಾಲ್ಯದಲ್ಲಿ, ಕೊಲ್ಲಂ ಮೂಲದ ಸುಜಾ ಥಾಂಚಚನ್ ಯಾವಾಗಲೂ ಲಾರಿಗಳು, ಟ್ರಕ್ ಗಳು ಮತ್ತು ದೊಡ್ಡ ಬಸ್ಸುಗಳನ್ನು ಓಡಿಸುವ ಕನಸು ಕಂಡಿದ್ದರು. ಆದರೆ, ಬಹುತೇಕ ಪುರುಷರು ನಡೆಸುವ ವೃತ್ತಿ ಇದಾಗಿದೆ. ಆದರೆ, ಈ ವೃತ್ತಿಯಲ್ಲಿ ಸುಜಾ ಅವರು ಆಸಕ್ತಿ ಹೊಂದಿದ್ದರು. ಆದರೆ, ಈ ಅವಕಾಶ ಇದೀಗ ಕೈಗೆಟಕಿದೆ.
ಕೇರಳ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಮತ್ತು ಖಾಸಗಿ ಟ್ಯಾಂಕರ್ಗಳನ್ನು ಓಡಿಸಿದ ಚಿಕ್ಕಪ್ಪನೊಂದಿಗೆ ಬೆಳೆದ ಸುಜಾ, ತನ್ನ ಮನೆಯ ಮುಂದೆ ನಿಲ್ಲಿಸಲಾಗುವ ಎಲ್ಲಾ ಹೆವಿ ಡ್ಯೂಟಿ ವಾಹನಗಳನ್ನು ಮೆಚ್ಚಿಕೊಂಡಿದ್ದರು.
ಮೂರು ದಶಕಗಳ ನಂತರ, ಅಂದರೆ ಸುಮಾರು 36 ವರ್ಷದ ಪ್ರಾಯದಲ್ಲಿ ಈಕೆ ತನ್ನ ಕನಸಿನ ಒಂದು ಭಾಗವನ್ನು ಈಡೇರಿಸಿದ್ದಾರೆ. ಅವರು ಅಧಿಕೃತವಾಗಿ ಪ್ರಮಾಣೀಕರಿಸಿದ ಹೆವಿ ಬಸ್ ಚಾಲಕರಾಗಿ ಪರವಾಣಿಗೆ ಪಡೆದುಕೊಂಡಿದ್ದಾರೆ. ಆದರೆ, ಈ ಕನಸು ಈಡೇರಿದ್ದು ಅರೇಬಿಕ್ ದೇಶದಲ್ಲಿ ಎನ್ನುವುದು ಪ್ರಮುಖ ವಿಚಾರವಾಗಿದೆ.
ನಿರಂತರ ಆರು ತಿಂಗಳ ಕಠಿಣ ಪರಿಶ್ರಮ ಹಾಗೂ ಹಲವು ವಿಫಲ ಯತ್ನದ ಬಳಿಕ ಸುಜಾ ಇದೀಗ ದುಬೈನಲ್ಲಿ ಚಾಲನಾ ಪರವಾಣಿಗೆ ಪಡೆದುಕೊಂಡಿದ್ದಾರೆ. ಯುಎಇಯಲ್ಲಿ ಎಲ್ಲಿಬೇಕಾದರೂ ಅವರು ಇನ್ನು ಮುಂದೆ ಹೆವಿ ವಾಹನಗಳನ್ನು ಚಲಾಯಿಸಬಹುದಾಗಿದೆ.