ಸೌದಿ ಅರೇಬಿಯಾ, ಅ 5 (Daijiworld News/RD): ಯಾವುದೇ ಸಂಬಂಧವನ್ನು ದೃಢೀಕರಿಸುವ ದಾಖಲೆ ಇಲ್ಲದೇ ಇದ್ದರೂ ವಿದೇಶಿ ಪುರುಷ ಮತ್ತು ಮಹಿಳೆಗೆ ಹೋಟೆಲ್ ರೂಂನಲ್ಲಿ ಉಳಿಯಲು ಸೌದಿ ಅರೇಬಿಯಾ ಅವಕಾಶ ನೀಡಿದೆ. ಈ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
ಕಠಿಣ ಕಾನೂನು ಹೊಂದಿರುವ ಸೌದಿ ಅರೇಬಿಯಾ, ಸಂಬಂಧ ಇಲ್ಲದ ಗಂಡು, ಹೆಣ್ಣು, ವಿದೇಶಿಯರು ಜತೆಗಿರುವುದು, ಹೋಟೆಲ್ ನಲ್ಲಿ ವಾಸಿಸುವುದು ಪತ್ತೆಯಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತಿತ್ತು. ಇದೀಗ ಹೊಸ ಟೂರಿಸ್ಟ್ ವೀಸಾ ನೀತಿಯಿಂದಾಗಿ ಅವಿವಾಹಿತ ವಿದೇಶಿ ಪ್ರವಾಸಿಗರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ, ಒಟ್ಟಿಗೆ ವಾಸಿಸಬಹುದಾಗಿದೆ.
ಯಾವುದೇ ಸಂಬಂಧವನ್ನು ದೃಢೀಕರಿಸುವ ದಾಖಲೆ ಇಲ್ಲದೆಯೇ ಹೋಟೆಲ್ ರೂಂನಲ್ಲಿ ವಾಸ್ತವ್ಯ ಹೂಡಲು ಅವಕಾಶ ಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ. ವಿದೇಶಿ ಪ್ರಜೆಗಳಿಗೆ ಯಾವುದೇ ದಾಖಲೆಯ ಅವಶ್ಯಕತೆ ಇಲ್ಲ. ಮಹಿಳೆಯರು ಸೇರಿದಂತೆ ಸೌದಿ ಜನರು ಕೂಡಾ ಹೋಟೆಲ್ ರೂಂ ಬುಕ್ ಮಾಡಬಹುದಾಗಿದೆ ಎಂದು ಸೌದಿಯ ಟೂರಿಸಂ ಮತ್ತು ನ್ಯಾಶನಲ್ ಹೆರಿಟೇಜ್ ಸ್ಪಷ್ಟಪಡಿಸಿದೆ.
ಪ್ರವಾಸೋಧ್ಯಮ ಮುಖ್ಯ ಆರ್ಥಿಕ ಮೂಲವಾಗಬೇಕು, ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ, "ಸೌದಿ ಅರೇಬಿಯಾವನ್ನು ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಮುಕ್ತಗೊಳಿಸುವುದು ನಮ್ಮ ದೇಶಕ್ಕೆ ಐತಿಹಾಸಿಕ ಕ್ಷಣ" ಎಂದು ಪ್ರವಾಸೋದ್ಯಮ ಇಲಾಖೆ ಮುಖ್ಯಸ್ಥ ಅಹ್ಮದ್ ಅಲ್- ಖತೀಬ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಲವತ್ತೊಂಬತ್ತು ದೇಶಗಳ ನಾಗರಿಕರಿಗೆ ಆನ್ ಲೈನ್ ವೀಸಾ ಅರ್ಜಿಗಳನ್ನು ಸೌದಿ ಅರೇಬಿಯಾ ಆರಂಭಿಸಲಿದೆ.