ವಾಷಿಂಗ್ಟನ್ ನ 05 (Daijiworld News/MB) :ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ಜಾದಿಯ ಸಹೋದರಿಯನ್ನು ಟರ್ಕಿ ಸೇನೆ ಬಂಧಿಸಿದೆ ಎಂದು ತಿಳಿದುಬಂದಿದೆ. ಆತ ಇತ್ತೀಚೆಗಷ್ಟೇ ಸಿರಿಯಾದಲ್ಲಿ ಮೃತಪಟ್ಟಿದ್ದ.ಅಮೆರಿಕಾದ ಸೇನೆ ಆತನ ಅಡಗು ತಾಣವನ್ನು ಸ್ಪೋಟಿಸಿ ಆತನನ್ನು ಹತ್ಯೆ ಮಾಡಿತ್ತು.
ಅಬೂಬಕರ್ ಬಾಗ್ದಾದಿ ಸಹೋದರಿ ರಸ್ಮಿಯಾ ಅವಾದ್ (65 ವರ್ಷ) ಅವರು ಉತ್ತರ ಸಿರಿಯಾದ ಎಜಾಜ್ ಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದರು. ಈಗ ಅವರನ್ನು ಟರ್ಕಿ ಸೇನೆ ಬಂಧಿಸಿದೆ. ಬಂಧನದ ವೇಳೆ ಆಕೆಯೊಂದಿಗೆ ಐದು ಜನ ಮಕ್ಕಳಿದ್ದರು ಎಂದು ತಿಳಿದು ಬಂದಿದೆ.
'ಆಕೆ ಇಸಿಸ್ ಉಗ್ರ ಸಂಘಟನೆಯೊಂದಿಗೆ ಸಕ್ರಿಯಳಾಗಿದ್ದಳು ಎಂದು ತಿಳಿದಿರುವುದರಿಂದ ಇಸಿಸ್ ಉಗ್ರ ಸಂಘಟನೆಗೆ ಸೇರಿದ ಪ್ರಮುಖ ಮಾಹಿತಿ ಆಕೆಗೆ ತಿಳಿದಿರುತ್ತದೆ' ಎಂದು ಸೇನೆ ಅಭಿಪ್ರಾಯಪಟ್ಟಿದೆ.