ಕತಾರ್, ನ 12 (Daijiworld News/ MB) : ’ಕರ್ನಾಟಕ ಸಂಘ ಕತಾರ್’ ಆಯೋಜಿಸುವ ಸಂಘದ 2 ದಶಕಗಳ ಸಂಭ್ರಮ ಮತ್ತು ಕರ್ನಾಟಕದ ಏಕೀಕರಣದ 64ನೇ ದಿನಾಚರಣೆಯಲ್ಲಿ ಪದ್ಮಶ್ರೀ ಪುರಸ್ಕೃತ, ಸರಸ್ವತಿ ಸಮ್ಮಾನಿತ ಪ್ರಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪರಿಗೆ ‘ಕತಾರ್ ಕನ್ನಡ ಸಮ್ಮಾನ’ ನೀಡಿ ಗೌರವಿಸಲಾಗುತ್ತದೆ.
ನವೆಂಬರ್ 15 ರ ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ದೆಹಲಿ ಸಾರ್ವಜನಿಕ ಶಾಲೆಯ ಸಭಾ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಎಸ್.ಎಲ್. ಭೈರಪ್ಪರವರೇ ಉದ್ಘಾಟಿಸಲಿದ್ದು, ನಟ ಪುನೀತ್ ರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಪ್ರತಿಭೆಗಳಿಗಳಾದ ಬಂಟ್ಸ್ ಸಂಘ ಕತಾರ್, ತುಳುಕೂಟ, ಕತಾರ್ ಬಿಲ್ಲವಾಸ್, ಎಂ.ಸಿ.ಸಿ, ಎಂ.ಸಿ.ಸಿ.ಎ, ಎಸ್.ಕೆ.ಎಂ.ಡಬ್ಲ್ಯು.ಎ, ಕೆ.ಎಂ.ಸಿ.ಎ ಹಾಗೂ ಕರ್ನಾಟಕ ಸಂಘದವರು ವಿವಿಧ ಕಾರ್ಯಕ್ರಮಗಳನ್ನು ನೀಡಲಿದ್ದಾರೆ.
ಯುವ ಗಾಯಕರಾದ ಶ್ರೀಹರ್ಷ ಮತ್ತು ಮೈತ್ರಿ ಅಯ್ಯರ್ ಅವರ ರಸಮಂಜರಿ ಕಾರ್ಯಕ್ರಮವು ನಡೆಯಲಿದೆ.