ಪ್ಯಾರೀಸ್, ನ 15(Daijiworld News/MB) : ಉಗ್ರರನ್ನು ಮಟ್ಟಹಾಕುವಲ್ಲಿ ವಿಫಲವಾದ ಪಾಕಿಸ್ತಾನದ ಡಿಎನ್ ಎ(ವಂಶವಾಹಿ)ಯಲ್ಲೇ ಭಯೋತ್ಪಾದನೆ ತುಂಬಿದೆ ಎಂದು ಭಾರತ ಪಾಕಿಸ್ತಾನಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದೆ.
ಫ್ರಾನ್ಸ್ ನಲ್ಲಿ ನಡೆದ ಯುನೆಸ್ಕೋ ಸಭೆಯಲ್ಲಿ ಭಾರತ ಜಮ್ಮು-ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ವಿರುದ್ಧ ನೇರ ಉತ್ತರ ನೀಡಿದೆ.
ಭಯೋತ್ಪಾದನೆಯೇ ತಮ್ಮ ನಡವಳಿಕೆಯಾಗಿರುವ ಪರಿಣಾಮ ಪಾಕಿಸ್ತಾನಕ್ಕೆ ಉಗ್ರರನ್ನು ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದ ಉಗ್ರವಾದದ ಪರಿಣಾಮ ಆರ್ಥಿಕ ವ್ಯವಸ್ಥೆಯೂ ದುರ್ಬಲವಾಗಿದೆ. ಸಮಾಜವನ್ನೇ ಉಗ್ರವಾದದತ್ತ ಮುಖಮಾಡಿಸುವ ಪಾಕಿಸ್ತಾನದ ಡಿಎನ್ ಎ ಯಲ್ಲಿ ಭಯೋತ್ಪಾದನೆ ಅಡಗಿದೆ ಎಂದು ಭಾರತದ ನಿಯೋಗದ ಪ್ರತಿನಿಧಿ ಅನನ್ಯ ಆಗರ್ವಾಲ್ ಯುನೆಸ್ಕೋ ಅಧಿವೇಶನದಲ್ಲಿ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿದ್ದಾರೆ.
ಈ ತೀವ್ರಗಾಮಿ ಸಿದ್ಧಾಂತದಿಂದಾಗಿ ಪಾಕ್ ಇನ್ನೂ ಕತ್ತಲಲ್ಲಿಯೇ ಇದೆ. ಜಮ್ಮು-ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಯುನೆಸ್ಕೋ ವೇದಿಕೆಯನ್ನು ರಾಜಕೀಯಗೊಳಿಸಲು ಮುಂದಾಗಿರುವುದು ಖಂಡಾನಾರ್ಹ ಎಂದು ತಿಳಿಸಿದರು.