ಇಸ್ಲಾಮಾಬಾದ್, ನ.15(Daijiworld News/SS): ಪಾಕಿಸ್ತಾನ ಭಾರತದ ಜೊತೆ ಯಾವುದೇ ರೀತಿಯ ಒಪ್ಪಂದವನ್ನು ನಡೆಸಲು ಸಿದ್ಧವಿಲ್ಲ ಎಂದು ಪಾಕ್ ಸರ್ಕಾರ ಹೇಳಿದೆ.
ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಕುಲಭೂಷನ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಜೆ ನಿರ್ಧಾರವನ್ನು ಜಾರಿಗೊಳಿಸುವುದಕ್ಕೆ ಕೈಗೊಳ್ಳುವ ಕ್ರಮಗಳು ತನ್ನ ಸಂವಿಧಾನದ ಪ್ರಕಾರವಾಗಿಯೇ ಇರುತ್ತದೆ ಎಂದು ಪಾಕಿಸ್ತಾನ ಸ್ಪಷ್ಟನೆ ನೀಡಿದೆ.
ಜಾಧವ್ ಪ್ರಕರಣವನ್ನು ಮರುಪರಿಶೀಲನೆ ಮಾಡಲು ಪಾಕಿಸ್ತಾನ ಕಾನೂನಿನ ಬೇರೆ ಬೇರೆ ಆಯ್ಕೆಗಳನ್ನು ಪರಿಗಣಿಸುತ್ತಿದೆ ಎಂದು ಪಾಕಿಸ್ತಾನದ ಸೇನೆ ಹೇಳಿತ್ತು. ಈ ಬೆನ್ನಲ್ಲೇ ಪಾಕ್’ನ ವಿದೇಶಾಂಗ ವಕ್ತಾರ ಮೊಹಮ್ಮದ್ ಫೈಸಲ್, ಭಾರತದ ಜೊತೆ ಯಾವುದೇ ರೀತಿಯ ಒಪ್ಪಂದವನ್ನು ನಡೆಸಲು ಸಿದ್ಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.