ಸಾನ್ ಫ್ರಾನ್ಸಿಸ್ಕೊ, ನ 16 (Daijiworld News/MSP): ಇನ್ಮುಂದೆ ಟ್ವಿಟರ್ ನಲ್ಲಿ ಯಾವುದೇ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ. ಯಾಕೆಂದರೆ ಜಗತ್ತಿನ ಪ್ರಸಿದ್ಧ ಸೋಷಿಯಲ್ ಮೀಡಿಯಾ ಟ್ವಿಟ್ಟರ್ ಎಲ್ಲಾ ರೀತಿಯ ರಾಜಕೀಯ ಜಾಹೀರಾತುಗಳಿಗೆ ಅಧಿಕೃತವಾಗಿ ನಿಷೇಧ ಹೇರಿದೆ.
ಜಾಗತಿಕ ಮಟ್ಟದಲ್ಲಿ ಟ್ವಿಟ್ಟರ್ ರಾಜಕೀಯ ವಿಷಯಗಳಿಗೆ ನಿಷೇಧ ಹೇರಿದ್ದು, ಯಾವುದೇ ಪಕ್ಷದ ಅಭ್ಯರ್ಥಿಗಳು, ಪಕ್ಷಗಳು, ಸರ್ಕಾರಗಳು ಅಥವಾ ಅಧಿಕಾರಿಗಳು, ಸಾರ್ವಜನಿಕ ಖಾತೆ ಸಮಿತಿಗಳು ಮತ್ತು ಕೆಲವು ರಾಜಕೀಯ ಲಾಭರಹಿತ ಸಂಸ್ಥೆಗಳು ರಾಜಕೀಯ ವಿಷಯಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಪ್ರಚಾರ ಮಾಡುವಂತಿಲ್ಲ ಎಂದು ಸಂಸ್ಥೆ ಹೇಳಿದೆ.
ರಾಜಕೀಯ ಜಾಹೀರಾತು ಬಗ್ಗೆ ಟ್ವಿಟರ್ ವಿವರಿಸಿದ್ದು, ’ರಾಜಕೀಯ ವಿಚಾರಗಳನ್ನು ಉಲ್ಲೇಖಿಸುವ, ಮತದಾರರಲ್ಲಿ ಮನವಿ ಮಾಡಿಕೊಳ್ಳುವ , ಹಣಕಾಸು ನೆರವು ಕೇಳುವ, ಯಾವುದೇ ರೀತಿಯ ರಾಜಕೀಯ ಪಕ್ಷದ ಅಥವಾ ವಿಚಾರದ ಪರವಾಗಿ ಅಥವಾ ವಿರುದ್ಧವಾಗಿ ಪೋಸ್ಟ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ.