ಬ್ಯಾಂಕಾಂಕ್, ನ.18(Daijiworld News/SS): ಜಪಾನ್ ರಕ್ಷಣಾ ಸಚಿವ ಮತ್ತು ಅಮೆರಿಕಾದ ರಕ್ಷಣಾ ಇಲಾಖೆ ಕಾರ್ಯದರ್ಶಿಯ ಜತೆಗೆ ಭಾರತ ಮಹತ್ವದ ಮಾತುಕತೆಯನ್ನು ನಡೆಸಿದೆ.
ಆಸಿಯಾನ್ ರಕ್ಷಣಾ ಸಚಿವರುಗಳ ಸಭೆಯ ಜೊತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಪಾನ್ ರಕ್ಷಣಾ ಸಚಿವ ಟರೊ ಕೊನೊ ಮತ್ತು ಅಮೆರಿಕಾದ ರಕ್ಷಣಾ ಇಲಾಖೆ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಮಾತ್ರವಲ್ಲ, ಆಸಿಯಾನ್ ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರು ಮತ್ತು ಇತರ 8 ದೇಶಗಳ ಸಚಿವರುಗಳು ಭಾಗವಹಿಸಿದ್ದು, ದೇಶಗಳ ನಡುವೆ ರಕ್ಷಣಾ ಸಹಕಾರಗಳ ಕುರಿತು ಚರ್ಚೆ ನಡೆಸಲಾಗಿದೆ.
ಜಪಾನ್ ರಕ್ಷಣಾ ಸಚಿವರ ಜೊತೆ ನಡೆಸಿದ ಮಾತುಕತೆಯ ಬಳಿಕ ಮಾತನಾಡಿದ ರಾಜನಾಥ್ ಸಿಂಗ್. ರಕ್ಷಣಾ ಸಹಕಾರದಲ್ಲಿ ಹೆಚ್ಚಿನ ಕೆಲಸ ಮಾಡುವುದಾಗಿ ಚರ್ಚೆ ನಡೆಸಿದೆವು ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ರಾಜನಾಥ್ ಸಿಂಗ್ ಅಮೆರಿಕಾ ರಕ್ಷಣಾ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿದ್ದು ಫಲಪ್ರದಾಯಕವಾಗಿತ್ತು ಎಂಬುವುದಾಗಿಯೂ ಹೇಳಿದ್ದಾರೆ.