ಕಾಬೂಲ್, ನ.19(Daijiworld News/SS): ಅನಾಸ್ ಹಖ್ಖಾನಿ ಸೇರಿದಂತೆ ಮೂವರು ತಾಲೀಬಾನ್ ಉಗ್ರರನ್ನು ಬಾಗ್ರಂ ಅಫ್ಘಾನಿಸ್ಥಾನ ಬಿಡುಗಡೆ ಮಾಡಿದೆ.
ಬಿಡುಗಡೆಯಾದ ಉಗ್ರರನ್ನು ಅನಾಸದ ಹಖ್ಖಾನಿ, ಹಾಜಿ ಮಲಿ ಖಾನ್, ಹಫೀಜ್ ರಶೀದ್ ಎಂದು ಗುರುತಿಸಲಾಗಿದೆ.
ಅಫ್ಘಾನಿಸ್ಥಾನದ ಅಮೇರಿಕನ್ ಯುನಿವರ್ಸಿಟಿಯ ಪ್ರೊಫೆಸರ್ಕೆವಿನ್ ಕಿಂಗ್ ಮತ್ತು ಟಿಮೊತಿ ವೀಕ್ಸ್ ಅವರನ್ನು ತಾಲಿಬಾನ್ ಉಗ್ರರು ಅಪಹರಿಸಿ ಬಂಧಿತ ಉಗ್ರರ ಬಿಡುಗಡೆಗೆ ಬೇಡಿಕೆ ನೀಡಿದ್ದರು. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಉಗ್ರರ ಷರತ್ತು ಬದ್ಧ ಬಿಡುಗಡೆಯ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಉಗ್ರರ ಬಿಡುಗಡೆಯ ಬಗ್ಗೆ ಅಮೇರಿಕಾ ರಾಯಭೇರಿ ಕಚೇರಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ.