ಲಂಡನ್, ನ 21 (Daijiworld News/MB): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಲಂಡನ್ ನ ಎನ್.ಎಚ್.ಎಸ್ ಆಸ್ಪತ್ರೆಯಲ್ಲಿ ಸರಣಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ ಹಿನ್ನಲೆಯಲ್ಲಿ ನವೆಂಬರ್ 19 ರ ಮಂಗಳವಾರ ಲಂಡನ್ ಗೆ ನವಾಝ್ ಶರೀಫ್ ಅವರನ್ನು ಕರೆತಂದು ಸರಣಿ ಚಿಕಿತ್ಸೆಗೆ ಒಳಪಡೆಸಲಾಗಿದ್ದು ಬಳಿಕ ಲಂಡನ್ ನ ಅವೆನ್ ಫೀಲ್ಡ್ ಅವರ ನಿವಾಸಕ್ಕೆ ಕರೆದೊಯ್ಯಲಾಗಿದೆ.
ನವಾಝ್ ಶರೀಫ್ ರನ್ನು ಎಲ್ಲಾ ವೈದ್ಯಕೀಯ ಸೌಲಭ್ಯವಿರುವ ವಿಶೇಷ ವಿಮಾನದ ಮೂಲಕ ಲಂಡನ್ ಗೆ ಕರೆತರಲಾಗಿದ್ದು, ಅವರ ಸಹೋದರ ಹಾಗೂ ಅವರ ವೈದ್ಯರಾದ ಅದ್ ನಾನ್ ಖಾನ್ ಜೊತೆಗಿದ್ದರು.
ಅಲ್ ಅಜೀಜಿಯಾ ಮಿಲ್ಸ್ ನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ 7 ವರ್ಷಗಳ ಸೆರೆಮನೆ ವಾಸ ಅನುಭವಿಸುತ್ತಿರುವ ಇವರು ಇಸ್ಲಮಾಬಾದ್ ಹೈಕೋರ್ಟ್ ಅಣಾರೋಗ್ಯದ ಕಾರಣ ಎಂಟು ವಾರಗಳ ಕಾಲ ಜಾಮೀನು ನೀಡಿತು. ಹಾರಾಟ ನಿಷೇಸ ಪಟ್ಟಿಯಲ್ಲಿ ಇದ್ದ ಇವರಿಗೆ ಲಾಹೋರ್ ಹೈಕೋರ್ಟ್ ಲಂಡನ್ ಗೆ ತೆರಳಲು ಅನುಮತಿ ನೀಡಿತು.