ಇಸ್ಲಾಮಾಬಾದ್, ನ.22(Daijiworld News/SS): ಪಾಕಿಸ್ತಾನದಲ್ಲಿ ಟೊಮೆಟೋ ಬೆಲೆ ದಾಖಲೆಯ ಏರಿಕೆ ಕಂಡಿದ್ದು, ಒಂದು ಕೆಜಿ ಗೆ ಬರೋಬ್ಬರಿ 400 ರೂ. ನಷ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನವೆಂಬರ್ ಮೊದಲ ವಾರದಲ್ಲಿ ಟೊಮೆಟೋ ಅಧಿಕೃತ ದರ ಕೆಜಿಗೆ 117 ರೂ. ನಷ್ಟಿತ್ತು. ಬಳಿಕ ಬೆಲೆ 193 ರೂ ಇದ್ದು ಅಧಿಕೃತ ಬೆಲೆ ಏರಿಕೆಯನ್ನು ಸರ್ಕಾರವೇ ಮಾಡುತ್ತಿದೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಕೇವಲ ಟೊಮೊಟೋ ಮಾತ್ರವಲ್ಲದೆ ಇತರೆ ತರಕಾರಿಗಳು ಹಾಗೂ ಹಣ್ಣುಗಳ ಬೆಲೆ ಸಹ ಏರಿಕೆಯಾಗಿದೆ. ಇರಾನ್'ನಿಂದ ಟೊಮೆಟೋಗೆ ಯಾವುದೇ ಬೆಲೆ ನಿಗದಿಯಾಗದ ಕಾರಣ, ವರ್ತಕರು ಸ್ವಾತ್ ಮತ್ತು ಸಿಂಧ್ ಬೆಳೆಗಳಿಗೆ ಇರಾನ್ ಟೊಮೆಟೋ ಬೆಲೆ ನಿಗದಿಪಡಿಸಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಕೆಲ ತಿಂಗಳ ಹಿಂದೆ ನಡೆದಿದ್ದ ಪುಲ್ವಾಮ ಉಗ್ರ ದಾಳಿಯ ನಂತರ ಭಾರತ ಪಾಕಿಸ್ತಾನಕ್ಕೆ ನೀಡಿದ್ದ ಮೋಸ್ಟ್ ಫೇವರ್ಡ್ ನೇಷನ್ ಸ್ಥಾನ ಮಾನವನ್ನು ಹಿಂಪಡೆದಿದ್ದು, ಇದು ಪಾಕಿಸ್ತಾನದ ಆರ್ಥಿಕತೆಗೆ ಮುಳುವಾಗಿದೆ.