ನ್ಯೂಯಾರ್ಕ್, ನ 25 (Daijiworld News/MB) : ತನ್ನ ಮನೆಗೆ ನುಗ್ಗಿದ 29 ವರ್ಷದ ಯುವಕನಿಗೆ 82 ವರ್ಷದ ಅಜ್ಜಿ ಹಿಗ್ಗಾಮುಗ್ಗ ತಳಿಸಿದ ಘಟನೆ ಇಲ್ಲಿನ ರೋಚೆಸ್ಟರ್ ಎಂಬಲ್ಲಿ ನಡೆದಿದೆ.
ಈ 82 ವರ್ಷದ ವಿಲ್ಲೀ ಮರ್ಫಿ ಎಂಬ ಅಜ್ಜಿ ಈ ಘಟನೆಯ ಬಳಿಕ "ನಾನು ಒಬ್ಬಂಟಿಯಾಗಿರುತ್ತೇನೆ ಮತ್ತು ವಯಸ್ಸಾಗಿದೆ ಆದರೂ ನಾನು ಗಟ್ಟಿಯಾಗಿದ್ದೇನೆ" ಎಂದು ಹೇಳಿದ್ದಾರೆ.
ಈ ಅಜ್ಜಿಯು ಬಾಡಿಬಿಲ್ಡರ್ ಆಗಿದ್ದು ವಿಶ್ವ ಚಾಂಪಿಯನ್ಶಿಪ್ ಪವರ್-ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹಾಗೆಯೇ ಈಗಲೂ ಜಿಮ್ಮ್ ಗೆ ಹೋಗುತ್ತಿದ್ದಾರೆ.
ಅಜ್ಜಿಯು ಮನೆಯಲ್ಲಿದ್ದ ಸಂದರ್ಭದಲ್ಲಿ 29 ವರ್ಷದ ಯುವಕ ಬಾಗಿಲು ಬಡಿದಾಗ ಬಾಗಿಲು ತೆರೆಯಲು ನಿರಾಕರಿಸಿದ್ದು, ತಾನು ಆಂಬುಲೆನ್ಸ್ ಗೆ ಕರೆ ಮಾಡಬೇಕು ಎಂದು ಹೇಳಿ ಯುವಕ ಮನವಿ ಮಾಡಿದ್ದು ನಂತರ ಬಾಗಿಲು ಮುರಿದು ಒಳ ನುಗ್ಗಿದ್ದಾನೆ.
ಬಾಡಿಬಿಲ್ಡರ್ ವಿಜೇತೆಯಾಗಿರುವ ಈ ಅಜ್ಜಿ ಒಮ್ಮಿಂದೊಮ್ಮೆ ಯುವಕನು ಬಾಗಿಲು ಮುರಿದಾಗ ಕೋಪಗೊಂಡು ಆತನಿಗೆ ಟೇಬಲ್, ಪೊರಕೆ ಕಡ್ಡಿಯಿಂದ ಹೊಡೆದಿದ್ದು ಮುಖಕ್ಕೆ ಶಾಂಪು ಹಚ್ಚಿದ್ದಾರೆ.
ಅಜ್ಜಿ ಕೇವಲ 5 ಅಡಿ ಎತ್ತರ ಮತ್ತು 105 ಪೌಂಡ್ ತೂಕವಿದ್ದರು ಅವರು 225 ಪೌಂಡ್ಗಳಷ್ಟು ಭಾರವನ್ನು ಎತ್ತುವ ಸಾಮರ್ಥ್ಯ ಹೊಂದಿದ್ದಾರೆ.
ಅಜ್ಜಿಯು ಪೊಲೀಸರಿಗೆ ಮಾಹಿತಿ ನೀಡಿದ್ದರೂ ತಾನು ಅನಾರೋಗ್ಯಕ್ಕೆ ಒಳಗಾಗಿದ್ದೇನೆ ಎಂದು ಹೇಳಿ ಒಳ ಬಂದ ಹಲ್ಲೆಕೋರನನ್ನು ತನ್ನ ಕೈಗೆ ಸಿಕ್ಕಿದ ವಸ್ತುಗಳಿಂದೆಲ್ಲಾ ತಳಿಸಿದ್ದಾರೆ.
"ನನಗೆ ಜೋರಾದ ಸದ್ದು ಕೇಳಿತ್ತು. ಆ ಸದ್ದು ಏನೆಂದು ನೋಡುವಾಗ ಒಬ್ಬಯುವಕ ನನ್ನ ಮನೆಯ ಬಾಗಿಲು ಮುರಿದು ನನ್ನ ಮನೆಗೆ ನುಗ್ಗಿದ್ದಾನೆ. ಆ ಕೂಡಲೇ ನಾನು ಅವನತ್ತ ಟೇಬಲನ್ನು ಬೀಸಿದೆ. ಟೇಬಲ್ ಮುರಿದು ಹೋಯಿತು. ಅವನು ನೆಲದಲ್ಲಿ ಬಿದ್ದ. ನಾನು ಅವನ ಮೇಲೆ ಹಾರಿ ಪೊರಕೆ ಕಡ್ಡಿಯಿಂದ ತಳಿಸಿದೆ. ಮುಖಕ್ಕೆ ಶಾಂಪು ಹಚ್ಚಿದೆ. ಅವನು ನನ್ನ ಮನೆಗೆ ಬರಲು ನಿರ್ಧರಿಸಿ ತಪ್ಪು ಮಾಡಿದ್ದಾನೆ. ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದಿದ್ದು, ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ನನ್ನ ಜಿಮ್ ನಲ್ಲಿ ಇರುವವರು ನನ್ನನ್ನು ಹೊಗಳಿದ್ದಾರೆ" ಎಂದು ಬಾಡಿಬಿಲ್ಡರ್ ಅಜ್ಜಿ ಹೇಳುತ್ತಾರೆ.