ಇಸ್ಲಾಮಾಬಾದ್, ನ.28(Daijiworld News/SS): ಮರಗಳು ರಾತ್ರಿ ಆಮ್ಲಜನಕವನ್ನು ಹೊರಸೂಸಿ, ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಜನರ ಜೀವ ರಕ್ಷಣೆಗೆ ನೆರವಾಗುತ್ತವೆ' ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಸ ವೈಜ್ಞಾನಿಕ ಸಂಶೋಧನೆ ಮಂಡಿಸಿ ಟೀಕೆಯ ಜೊತೆಗೆ ನಗೆಪಾಟಲಿಗೆ ಈಡಾಗಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಶೇಕಡಾ 70ರಷ್ಟು ಹಸಿರು ಹೊದಿಕೆಯನ್ನು ಕಡಿತಗೊಳಿಸಲಾಗಿದೆ. ಮರಗಳು ಗಾಳಿಯನ್ನು ಸ್ವಚ್ಛಗೊಳಿಸುವುದರಿಂದ ಅವು ರಾತ್ರಿಯಲ್ಲಿ ಆಮ್ಲಜನಕವನ್ನು ನೀಡುತ್ತವೆ. ಮರಗಳು ಕಾರ್ಬನ್ ಡೈಆಕ್ಸೈಡ್ ಅನ್ನು ಸಹ ಹೀರಿಕೊಳ್ಳುತ್ತವೆ ಎಂದು ಖಾನ್ ಹೇಳಿದ್ದಾರೆ.
ಈ ಹಿಂದೆಯೂ ಹಲವಾರು ಹೇಳಿಕೆಗಳನ್ನು ನೀಡುವ ಮೂಲಕ ಸ್ವದೇಶಿಯರಿಂದಲೇ ಟೀಕೆಗೆ ಒಳಗಾಗುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇದೀಗ ಮತ್ತೆ ಟೀಕೆಗಳಿಗೆ ಗುರಿಯಾಗಿದ್ದಾರೆ.