ಖರ್ಟೋಮ್, ಡಿ 4 (Daijiworld News/ MB) : ಸೆರಾಮಿಕ್ಸ್ ಕಾರ್ಖಾನೆಯಲ್ಲಿ ಎಲ್ ಜಿಪಿ ಟ್ಯಾಂಕರ್ ಸ್ಫೋಟಗೊಂಡು ದುರಂತದಲ್ಲಿ 18 ಭಾರತೀಯರು ಸೇರಿದಂತೆ 23 ಮಂದಿ ಮೃತಪಟ್ಟ ಘಟನೆ ಸುಡಾನ್ ರಾಜಧಾನಿ ಖರ್ಟೋಮ್ ನಲ್ಲಿ ನಡೆದಿದೆ ಎಂದು ಬುಧವಾರ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಸುಡಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಈ ದುರಂತ ಖರ್ಟೋಮ್ ನ ಬಹ್ರಿ ಪ್ರದೇಶದಲ್ಲಿರುವ ಸೀಲ ಸೆರಾಮಿಕ್ಸ್ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಘಟಿಸಿದ್ದು 18 ಭಾರತೀಯರು ಮೃತಪಟ್ಟಿದ್ದಾರೆ ಎಂದು ಖಚಿತ ಪಡಿಸಿದೆ.
50ಕ್ಕೂ ಹೆಚ್ಚು ಭಾರತೀಯರು ಕಾರ್ಮಿಕರು ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಘಟನೆಯ ಬಳಿಕ 16 ಭಾರತೀಯ ಕಾರ್ಮಿಕರು ನಾಪತ್ತೆಯಾಗಿದ್ದು ಹೀಗಿರುವಾಗ ಭಾರತೀಯ ಕಾರ್ಮಿಕರ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಭಾರತೀಯರ ಪಟ್ಟಿಯನ್ನು ರಾಯಭಾರಿ ಬಹಿರಂಗಪಡಿಸಿದ್ದು, 7 ಭಾರತೀಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಸ್ಪೋಟದಿಂದ ದೇಹಗಳು ಸಂಪೂರ್ಣ ಸುಟ್ಟುಹೋಗಿರುವುದರಿಂದ ಪತ್ತೆಹಚ್ಚಲು ಕಷ್ಟಕರವಾಗಿದ್ದು ಬದುಕುಳಿದಿರುವ 34 ಭಾರತೀಯರಿಗೆ ಸಲೂಮಿ ಸೆರಾಮಿಕ್ಸ್ ಕಾರ್ಖಾನೆಯ ನಿವಾಸಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಅಗ್ನಿ ಸುರಕ್ಷತಾ ಕ್ರಮ ದುರಂತ ನಡೆದ ಸ್ಥಳದಲ್ಲಿ ಇರದಿದ್ದರ ಪರಿಣಾಮವಾಗಿ ಹೆಚ್ಚಿನ ಅನಾಹುತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯ ಮುಖೇನ ತಿಳಿದು ಬಂದಿದ್ದು
ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಯಾವುದೇ ಸುರಕ್ಷತೆಯಿಲ್ಲದೆ ಸಂಗ್ರಹಿಸಿಟ್ಟಿದ್ದು ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.