ರಿಯಾದ್,ಡಿ 6 (Daijiworld News/MSP): ಸೌದಿ ಅರೇಬಿಯಾದ ತನ್ನ ನೀತಿಯಲ್ಲಿ ಬದಲಾವಣೆಯ ಕಡೆ ಹೆಜ್ಜೆ ಇಡುತ್ತಿದ್ದು, ಇದೀಗ ವಿದೇಶೀಯರಿಗೂ ಪೌರತ್ವ ನೀಡುವ ಮಹತ್ವದ ತೀರ್ಮಾನ ಕೈಗೊಂಡಿದೆ.
ಸೌದಿಯಲ್ಲಿ ಈವರೆಗೆ ತತ್ಕಾಲಿಕವಾಗಿ ಪೌರತ್ವ ನೀಡಲಾಗುತ್ತಿದ್ದರೂ ವಿದೇಶಿಯರಿಗೆ ಶಾಶ್ವತ ಪೌರತ್ವ ಪಡೆಯುವುದು ಇಲ್ಲಿಯವರೆಗೆ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ವಿವಿಧ ವಲಯಗಳಲ್ಲಿರುವ ವೃತ್ತಿಪರರು, ತಜ್ಞರಿಗೆ ಪೌರತ್ವವನ್ನು ನೀಡುವುದಾಗಿ ಸೌದಿ ಸರ್ಕಾರ ಘೋಷಣೆ ಮಾಡಿದೆ. ಸೌದಿ ದೇಶ ತನ್ನ ಭವಿಷ್ಯದ ಬಗ್ಗೆ ಯೋಚಿಸಿ ಈಗಿನಿಂದಲೇ ತನ್ನ ಆರ್ಥಿಕತೆಯನ್ನು ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ
ತೈಲ ಉತ್ಪಾದನೆ, ಮಾರಾಟ ನಿಂತರೆ ಆ ಬಳಿಕ ಅರ್ಥಿಕತೆಯನ್ನು ರೂಪಿಸುವುದು ಹೇಗೆ ಎನ್ನುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ. ವಿಜ್ಞಾನಿಗಳು, ಡಾಕ್ಟರ್ ,ನ್ಯೂಕ್ಲಿಯರ್- ಮರುಬಳಕೆ ಇಂಧನ ತಜ್ಞರು, ಕೃತಕ ಬುದ್ಧಿಮತ್ತೆ ಪರಿಣತರು, ಕೃಷಿ ತಜ್ಞರು ಹೀಗೆ ವಿವಿಧ ವಲಯದ ವಿಶೇಷ ಪರಿಣತರಿಗೆ ಪೌರತ್ವ ನೀಡುವ ಮೂಲಕ ಸೌದಿಯನ್ನು ಸಮೃದ್ಧಿ ಮತ್ತು ವೈವಿಧ್ಯ ದೇಶವನ್ನಾಗಿ ನಿರ್ಮಿಸಲಾಗುತ್ತದೆ ಎಂದು ಸರಕಾರದ ನಿರ್ಧಾರಗಳನ್ನು ಪ್ರಕಟಿಸುವ ವೇದಿಕೆ ಸೌದಿ ಪ್ರಾಜೆಕ್ಟ್ ಟ್ವೀಟ್ ಮಾಡಿದೆ.